‘ನದಿಗಳ ಸಂರಕ್ಷಣೆಗಾಗಿ ಅಭಿಯಾನ’ ಮಾಹಿತಿ
ಶಿರ್ವ, ಅ.16: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾ ಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ವಿಭಾಗ ಹಾಗೂ ರೋಟರ್ಯಾಕ್ಟ್ ಘಟಕಗಳ ಸಹಯೋಗದೊಂದಿಗೆ ‘ನದಿಗಳ ಸಂರಕ್ಷಣೆಗಾಗಿ ಅಭಿಯಾನ’ ಮಾಹಿತಿ ಕಾರ್ಯಕ್ರಮವು ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಕುಂಜಾರು ಪಾಜಕ ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಗೀತಾ ಕೋಟ್ಯಾನ್ ನೀರಿನ ಮಿತ ಬಳಕೆ, ಮರು ಬಳಕೆ, ಮಳೆ ನೀರುಕೊಯ್ಲು ಹಾಗೂ ನೀರಿನ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಸಿವಿಲ್ ಇಂಜಿನಿಯಿಂಗ್ ವಿಭಾಗದ ಪ್ರಾಧ್ಯಾಪಕ ಸುನಿಲ್ ಹಲ್ದಾಂಕರ್ ಮಾತನಾಡಿ, ನದಿಗಳ ಪುನರುಜ್ಜೀವನ ಹಾಗೂ ನದಿ ದಡಗಳ ಉದ್ದಕ್ಕೂ ಗಿಡಗಳನ್ನು ನೆಡುವ ಕೆಲಸ ಮಾಡಬೇಕಾಗಿದೆ. ನದಿಗಳ ಪುನರಜ್ಜೀವನ ನೀತಿ ಶಿಪಾರಸ್ಸಿನ ಕುರಿತು ಸಾಕಷ್ಟು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಸುದರ್ಶನ್ ರಾವ್ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಸಂಚಾಲಕ ನಾರಾಯಣ್ ನಾಯಕ್ ಉಪಸ್ಥಿತರಿ ದ್ದರು. ಜ್ಯೋತಿ ಅತಿಥಿಗಳನ್ನು ಪರಿಚಯಿಸಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.