×
Ad

ನಾನು ಮೊಗಲರನ್ನು ವಿರೋಧಿಸಿದ್ದೇನೆಯೇ ಹೊರತು ತಾಜ್ ಮಹಲನ್ನು ಅಲ್ಲ: ಬಿಜೆಪಿ ಶಾಸಕ ಸಂಗೀತ್ ಸೋಮ್

Update: 2017-10-16 21:27 IST

ಹೊಸದಿಲ್ಲಿ, ಅ.16: ತಾನು ಮೊಗಲರನ್ನು ವಿರೋಧಿಸಿದ್ದೇನೆಯೇ ಹೊರತು ತಾಜ್ ಮಹಲನ್ನು ವಿರೋಧಿಸಿಲ್ಲ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಸ್ಪಷ್ಟಪಡಿಸಿದ್ದಾರೆ.

“ನಾನು ತಾಜ್ ಮಹಲನ್ನು ವಿರೋಧಿಸಿಲ್ಲ. ಅದು ಸುಂದರವಾದ ಪಾರಂಪರಿಕ ಕಟ್ಟಡ. ನಾನು ತಾಜ್ ಮಹಲನ್ನು ಕಟ್ಟಿದ ಮೊಗಲರನ್ನು ಹಾಗು ಅವರನ್ನು ಇತಿಹಾಸದಲ್ಲಿ ಚಿತ್ರಿಸಿರುವ ರೀತಿಯನ್ನು ವಿರೋಧಿಸಿದ್ದೇನೆ” ಎಂದವರು ಹೇಳಿದರು.

ಈ ಮೊದಲು ತಾಜ್ ಮಹಲ್ ಕುರಿತಂತೆ ಹೇಳಿಕೆ ನೀಡಿದ್ದ ಸಂಗೀತ್ ಸೋಮ್ ತಾಜ್ ಮಹಲ್ ದೇಶದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿದೆ. ಭಾರತದ ಅದ್ಭುತ ಇತಿಹಾಸದ ಭಾಗವಾಗಿ ಮೊಗಲರನ್ನು ಕಾಣುವುದಾದರೆ ಇತಿಹಾಸವನ್ನೇ ನಾವು ಬದಲಾಯಿಸಿ ಬಿಡುತ್ತೇವೆ” ಎಂದು ನಾನು ಹೇಳಬಲ್ಲೆ ಎಂದಿದ್ದರು.

ಸಂಗೀತ್ ಸೋಮ್ ರ ಈ ಹೇಳಿಕೆ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News