ಬಾವಿಗೆ ಬಿದ್ದು ಮಹಿಳೆ ಮೃತ್ಯು
Update: 2017-10-16 23:06 IST
ಕಾಪು, ಅ.16: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕ ವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಅ.15ರಂದು ಸಂಜೆ ವೇಳೆ ಕಾಪು ಸಮೀಪ ನಡೆದಿದೆ.
ಮೃತರನ್ನು ಕಾಪು ಶ್ರೀಜನಾರ್ದನ ದೇವಸ್ಥಾನ ಬಳಿಯ ನಿವಾಸಿ ದಿನೇಶ್ ಪೈ ಎಂಬವರ ಪತ್ನಿ ದೀಪಾ ಪೈ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ ದೀಪಾ ಪೈ ಇದೇ ಕಾರಣದಿಂದ ಕಾಪು ಬಂಟರ ಸಂಘದ ಜಾಗದಲ್ಲಿರುವ ಬಾವಿಯ ಸಮೀಪ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿ ದ್ದಾರೆನ್ನಲಾಗಿದೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.