ಸಾಲಬಾಧೆ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
Update: 2017-10-16 23:12 IST
ಶಂಕರನಾರಾಯಣ, ಅ.16: ಸಾಲಬಾಧೆಯಿಂದ ಮನನೊಂದ ವ್ಯಾಪಾರಸ್ಥ ರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಕೇರಳ ರಾಜ್ಯದ ವಯನಾಡಿನ ಗಿರೀಂದ್ರನ್(49) ಎಂದು ಗುರು ತಿಸಲಾಗಿದೆ. ಹಳ್ಳಿಹೊಳೆ ಗ್ರಾಮದ ದೊಡ್ಡ ಬೀಸ್ ಎಂಬಲ್ಲಿ ದಿನಸಿ ಅಂಗಡಿ ಇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಇವರು, ಸಾಲ ಬಾಧೆಯಿಂದ ಜೀವನ ದಲ್ಲಿ ಜಿಗುಪ್ಸೆಗೊಂಡು ಅ.12ರಂದು ರಾತ್ರಿ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ತೀವ್ರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖ ಲಾಗಿದ್ದ ಅವರು ಅ.14ರಂದು ರಾತ್ರಿ 11ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.