×
Ad

ದಲಿತ ದೌರ್ಜನ್ಯ ಕಾಯ್ದೆ ತಿದ್ದುಪಡಿಯಾಗಲಿ: ಲಿಂಗಪ್ಪ ನಂತೂರು

Update: 2017-10-16 23:16 IST

ಕುಂದಾಪುರ, ಅ.15: ದಲಿತರ ಮೇಲೆ ದೌರ್ಜನ್ಯ ನಡೆದಾಗ ದೌರ್ಜನ್ಯ ಕ್ಕೊಳಗಾದ ದಲಿತರು ದೂರು ನೀಡಿದರೆ ಆರೋಪಿ ವಿರುದ್ಧ 24 ಗಂಟೆಯೊಳಗೆ ಕ್ರಮ ಜರುಗಿಸಬೇಕಾಗುತ್ತದೆ. ಆದರೆ ಇಂದಿನ ವ್ಯವಸ್ಥೆ ಮಾತ್ರ ಉಳ್ಳವರ ಪರ ವಾಗಿರುವುದರಿಂದ ದಲಿತರಿಗೆ ನ್ಯಾಯ ಸಿಗುವ ಬದಲು ಕೆಲವು ಕಡೆಗಳಲ್ಲಿ ಬಿ ರಿಪೋರ್ಟ್ ಹಾಕಿ ದುರ್ಬಲಗೊಳಿಸಲಾಗುತ್ತಿದೆ ಎಂದು ರಾಜ್ಯ ದಲಿತ ಹಕ್ಕು ಗಳ ಸಮಿತಿಯ ಮುಖಂಡ ಲಿಂಗಪ್ಪನಂತೂರು ಹೇಳಿದ್ದಾರೆ.

ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ದಲಿತ ಹಕ್ಕುಗಳ ಸಮಾವೇಶವನ್ನು ಉಧ್ಘಾಟಿಸಿ ಅವರು ಮಾತನಾಡು ತಿದ್ದರು. ದಲಿತ ಹಕ್ಕುಗಳ ರಾಷ್ಟ್ರೀಯ ಮುಕ್ತಿ ಮಂಚ್ ಸಂಘಟನೆ ದುರು ಪಯೋಗವಾಗುತ್ತಿರುವ ದಲಿತ ದೌರ್ಜನ್ಯ ಕಾಯ್ದೆಯನ್ನು ಬಿಗಿಗೊಳಿಸಲು ತಿದ್ದು ಪಡಿ ಮಾಡಬೇಕೆಂದು ಹೋರಾಟ ನಡೆಸುತ್ತಿದೆ. ಪ್ರಭುತ್ವವೇ ಇಂದು ದಲಿತ ರಾದ ನಮ್ಮನ್ನು ತಿನ್ನಲು, ಬದುಕಲು ಬಿಡುತ್ತಿಲ್ಲ. ಮತಾಂಧರು ದಲಿತರನ್ನು ರಾಜಕೀಯ ಲಾಭಕ್ಕಾಗಿ ಕೋಮುಗಲಭೆಗಳಿಗಾಗಿ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿ ಇದುವರೆಗೆ 2ಲಕ್ಷ 60 ಸಾವಿರ ದಲಿತ ಯುವಕರ ಮೇಲೆ ದೂರು ದಾಖಲಾಗಿದೆ. ದಲಿತ ಅನುಭವಿಸುವ ಅವಮಾನ, ಅಪಮಾನದ ವಿರುದ್ದ ಹೋರಾಟ ಮಾಡುವ ಮನೋಭಾವ ಬೆಳೆಸುವ ಬದಲು ದಾರಿ ತಪ್ಪಿಸ ಲಾಗುತ್ತಿದೆ. ಆದುದರಿಂದ ದಲಿತರು ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕು ಎಂದು ಅವರು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ರವಿ ವಿ.ಎಂ. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ದಲಿತ ಹಕ್ಕುಗಳ ಸಂಚಲನಾ ಸಮಿತಿಗೆ ರವಿ ವಿ.ಎಂ., ಅರುಣ್ ಕುಮಾರ್, ನಾಗರತ್ನ ನಾಡರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಕೆ.ಶಂಕರ್, ಮಹಾಬಲ ವಡೇರಹೋಬಳಿ, ಎಚ್. ನರಸಿಂಹ, ಸುರೇಶ್ ಕಲ್ಲಾಗರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News