×
Ad

ಆಲಂಪುರಿಯಲ್ಲ್ಲಿ ಟ್ರೀ ಪಾರ್ಕ್ ನಿರ್ಮಾಣ: ಸಚಿವ ರೈ

Update: 2017-10-17 17:42 IST

ಬಂಟ್ವಾಳ, ಅ. 17: ತಾಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಆಲಂಪುರಿ ಎಂಬಲ್ಲಿ ಸುಮಾರು 40 ಎಕರೆ ಗೋಮಾಳ ಸಹಿತ ಸರಕಾರಿ ಜಮೀನಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಸುಸಜ್ಜಿತ ಟ್ರೀ ಪಾರ್ಕ್ ನಿರ್ಮಿಸಿ ಬಳಿಕ ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ತಾಲೂಕಿನ ವಗ್ಗದಲ್ಲಿ ಅರಣ್ಯ ಇಲಾಖೆ ವಿಶೇಷ ಘಟಕ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ್ ಮತ್ತು ಸ್ಟ್ಟವ್ ವಿತರಣೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

 ಡಿಸೆಂಬರ್‌ನಲ್ಲಿ ಸರಕಾರದ ವತಿಯಿಂದ ಅನಿಲ ಭಾಗ್ಯ ಯೋಜನೆ ಸಹಿತ ಪ್ರತಿ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರಕಾರ ನಿರ್ಧರಿಸಿದೆ ಎಂದರು. ಇದೇ ವೇಳೆ ಪ್ರವಾಸೋದ್ಯಮ ಇಲಾಖೆ ಯೋಜನೆಂುಡಿ ಕಾರಿಂಜ ಕ್ಷೇತ್ರ -ಅಲ್ಲಿಪಾದೆ ರಸ್ತೆಗೆ 65ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ಜಿಪಂ ಸದಸ್ಯ ಬಿ.ಪದ್ಮಶೇಖರ ಜೈನ್, ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸದಸ್ಯೆ ಸ್ವಪ್ನಾ ವಿಶ್ವನಾಥ ಪೂಜಾರಿ, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಕೆ.ಮಾಯಿಲಪ್ಪಸಾಲ್ಯಾನ್, ಕಾರಿಂಜ ಕ್ಷೇತ್ರದ ಧರ್ಮದರ್ಶಿ ಪಿ.ಜಿನರಾಜ ಅರಿಗ, ಕಾವಳಮೂಡೂರು ಗ್ರಾಪಂ ಅಧ್ಯಕ್ಷ ಸಂತೋಷ್ ಪೂಂಜ, ಕಾವಳಪಡೂರು ಗ್ರಾಪಂ ಅಧ್ಯಕ್ಷ ಕೆ.ಪ್ರಮೋದ್ ಕುಮಾರ್ ರೈ, ಪಿಡಬ್ಲುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವೈ.ಉಮೇಶ್ ಭಟ್, ಗ್ಯಾಸ್ ವಿತರಕ ಜಗನ್ನಾಥ ಚೌಟ, ಪ್ರಮುಖರಾದ ಜನಾರ್ದನ ಚಂಡ್ತಿಮಾರ್, ಉದಯ ಹೆಗ್ಡೆ ಬೆಂಗಳೂರು ಮತ್ತಿತರರು ಇದ್ದರು.

ಚಂದ್ರಶೇಖರ ಮಧ್ವ ಸ್ವಾಗತಿಸಿದರು. ವಲಯ ಅರಣ್ಯಾಕಾರಿ ಬಿ.ಸುರೇಶ್ ವಂದಿಸಿದರು. ಆದಿರಾಜ್ ಜೈನ್ ಅಲ್ಲಿಪಾದೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News