×
Ad

ದ.ಕ. ಜಿಲ್ಲಾ ಕರ್ನಾಟಕ ಪ್ರದೇಶ ವಿದ್ಯಾರ್ಥಿ ಜನತಾದಳ (ಜಾತ್ಯತೀತ) ಉದ್ಘಾಟನಾ ಸಮಾರಂಭ

Update: 2017-10-17 19:26 IST

ಮಂಗಳೂರು, ಅ. 17: ಕರ್ನಾಟಕ ಪ್ರದೇಶ ವಿದ್ಯಾರ್ಥಿ ಜನತಾದಳ ದಕ್ಷಿಣ ಕನ್ನಡ ಜಿಲ್ಲಾ ನೂತನ ಘಟಕ ಉದ್ಘಾಟನಾ ಸಮಾರಂಭವು ಮಂಗಳೂರು ನಗರದ ಮಿನಿ ವಿಧಾನಸೌಧ ಬಳಿಯ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಜನತಾದಳದ ರಾಜ್ಯಾಧ್ಯಕ್ಷ  ಆರ್ ಚಂದ್ರಶೇಖರ್ ಅವರು ಜಿಲ್ಲಾ ನೂತನ ಘಟಕದ ಅಧ್ಯಕ್ಷರಾಗಿ ಸಿನಾನ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ತೇಜಸ್ ನಾಯಕ್ ಅವರಿಗೆ ನೇಮಕಾತಿ ಪತ್ರ ವಿತರಿಸಿ, ನಂತರ ಮಾತನಾಡಿದರು.

 ಆರ್ ಚಂದ್ರಶೇಖರ್  ಮಾತನಾಡಿ, ವಿದ್ಯಾರ್ಥಿ ನಿಟ್ಟಿನಲ್ಲಿ ನಾಯಕತ್ವವನ್ನು ಬೆಳೆಸಿಕೊಂಡು ಮುಂದಿನ ಬಾರಿ ಕುಮಾರಣ್ಣರಿಗೆ ಶಕ್ತಿ ತುಂಬಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ ಮಾತನಾಡಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಕೋಮುಗಲಭೆಯಿಂದ ವಿದ್ಯಾರ್ಥಿಗಳು ದೂರ ಉಳಿದು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದ ನೇತೃತ್ವ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಜಿಲ್ಲಾಧ್ಯಕ್ಷರು ಅಕ್ಷಿತ್ ಸುವರ್ಣ ವಿಧ್ಯಾರ್ಥಿಗಳಿಗೆ ವಿವಿಧ ಜವಾಬ್ದಾರಿ ವಹಿಸಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭ ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಖಾದರ್ ಮಂಗಳೂರು, ದಕ್ಷಿಣ ಕ್ಷೇತ್ರ ಅಧ್ಯಕ್ಷ ವಸಂತ ಪೂಜಾರಿ, ರಾಜ್ಯ ನಾಯಕರಾದ ಹೈದರ್ ಪರ್ತಪಾಡಿ, ಜೆ ಮಹಮ್ಮದ್, ಗೋಪಾಲಕೃಷ್ಣ ಅತ್ತಾವರ, ಫೈಸಲ್, ಇಕ್ಬಾಲ್ ಮುಲ್ಕಿ, ಗುರುದಾಸ್, ಶ್ರೀಧರ್ ಗೌಡ ಬಿದರೆ, ಶ್ರೀನಾಥ್ ರೈ, ಜಿಲ್ಲಾ ನಾಯಕರುಗಳಾದ ನಾಸೀರ್, ಕನಕದಾಸ್, ಜಿಲ್ಲಾ ಯುವ ನಾಯಕರುಗಳಾದ ಮಧುಸೂದನ್ ಗೌಡ, ಲಿಖಿತ್ ರಾಜ್, ಅರ್ಷಕ್ ಇಸ್ಮಾಯಿಲ್, ದೀಪಕ್, ಕಿಶೋರ್ ಶೆಟ್ಟಿ, ರತೀಶ್ ಕರ್ಕೇರ, ಜಿಲ್ಲಾ ವಿದ್ಯಾರ್ಥಿ ನಾಯಕರುಗಳಾದ ರಿತೇಶ್ ರೈ, ಪ್ರಜ್ವಲ್, ಲೋಯ್ಡ್ ಮುಲ್ಕಿ, ಕೌಶಿಕ್ ಪೂಜಾರಿ, ಸಂರಜ್ ರಾಝಕ್, ರಾಜ್ಯ, ಜಿಲ್ಲಾ, ವಿದ್ಯಾರ್ಥಿ ಮುಖಂಡರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News