×
Ad

ಉಪ್ಪಿನಂಗಡಿ: ಬೈಕಿಗೆ ಬಸ್ ಢಿಕ್ಕಿ; ದಂಪತಿ ಮೃತ್ಯು

Update: 2017-10-17 20:30 IST

ಉಪ್ಪಿನಂಗಡಿ, ಅ. 17: ಖಾಸಗಿ ಬಸ್ಸೊಂದು ಓವರ್ಟೇಕ್ ಮಾಡುವ ಭರದಲ್ಲಿ ಬೈಕಿಗೆ ಢಿಕ್ಕಿ ಹೊಡೆದಿದ್ದು, ಇದರಿಂದ ಬೈಕ್ ಸವಾರ ದಂಪತಿ ಮೃತಪಟ್ಟ ಘಟನೆ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೊಯಿಲತಡ್ಡ ನಿವಾಸಿ ಸೀನಪ್ಪ ಆಚಾರ್ಯ ಹಾಗೂ ಅವರ ಪತ್ನಿ ವಿಶಾಲಾಕ್ಷಿ ಮೃತರು ಎಂದು ಗುರುತಿಸಲಾಗಿದೆ. 

ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ತೆರಳುತಿದ್ದ ಬೈಕಿಗೆ, ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ವರುಣ್ ಟ್ರಾವೆಲ್ಸ್ ಎಂಬ ಖಾಸಗಿ ಬಸ್ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ದಂಪತಿ ಬಸ್ಸಿನಡಿಗೆ ಎಸೆಯಲ್ಪಟ್ಟುದ್ದು, ಈ ಸಂದರ್ಭ ಬಸ್ಸಿನ ಚಕ್ರಗಳು ಸೀನಪ್ಪ ಆಚಾರ್ಯ ಅವರ ಮೇಲೆ ಹರಿದಿದ್ದು, ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ವಿಶಾಲಾಕ್ಷಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. 

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News