×
Ad

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜನಾರ್ದನ ತೋನ್ಸೆ

Update: 2017-10-17 20:58 IST

ಉಡುಪಿ, ಅ.17: ಬಹುಕಾಲದ ನಿರೀಕ್ಷೆಯ ಬಳಿಕ ಉಡುಪಿ ಜಿಪಂನ ಹಾಲಿ ಸದಸ್ಯ ಜನಾರ್ದನ ತೋನ್ಸೆ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನಿಯುಕ್ತಿಗೊಳಿಸಲಾಗಿದೆ.

ಜನಾರ್ದನ ತೋನ್ಸೆ ಅವರ ಹೆಸರನ್ನು ಸೋಮವಾರ ಬೆಂಗಳೂರಿನಲ್ಲಿ ಪ್ರಕಟಿಸಲಾಯಿತು. ತೋನ್ಸೆ ಅವರು ಕಳೆದ ಸುಮಾರು ಆರು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿದ್ದ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರು ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ನಾಲ್ಕು ದಶಕಗಳಿಗೂ ಅಧಿಕ ಕಾಲ ಕಾಂಗ್ರೆಸ್‌ನ ಸಕ್ರೀಯ ಕಾರ್ಯಕರ್ತರಾ ಗಿರುವ ಜನಾರ್ದನ ತೋನ್ಸೆ ಪ್ರಸ್ತುತ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸುತಿದ್ದಾರೆ. ಅವರು ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದಂದಿನಿಂದ ಈ ಹುದ್ದೆಯನ್ನು ನಿರ್ವಹಿಸುತಿದ್ದಾರೆ.
 ಕಲ್ಯಾಣಪುರ ಗ್ರಾಪಂನ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿದ್ದ ತೋನ್ಸೆ, ಕೆಲ ಸಮಯ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಎರಡು ಬಾರಿ ಕಲ್ಯಾಣಪುರನಿಂದ ಜಿಪಂ ಸದಸ್ಯರಾಗಿ ಚುನಾಯಿತರಾಗಿದ್ದರು.

ಕಲ್ಯಾಣಪುರ ಗ್ರಾಪಂನ ಅ್ಯಕ್ಷರಾಗಿಮೂರುಬಾರಿಆಯ್ಕೆಯಾಗಿದ್ದತೋನ್ಸೆ,ಕೆಲಸಮಯಉಡುಪಿನಗರಾಭಿವೃದ್ಧಿಪ್ರಾಧಿಕಾರದಅ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಎರಡು ಬಾರಿ ಕಲ್ಯಾಣಪುರನಿಂದ ಜಿಪಂ ಸದಸ್ಯರಾಗಿ ಚುನಾಯಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News