ಅ.23: ರೈಲು ನಿಲ್ದಾಣದಲ್ಲಿ ಪ್ರತಿಭಟನೆ
Update: 2017-10-17 21:00 IST
ಕುಂದಾಪುರ, ಅ.17: ರೈಲ್ವೆ ಸೇವೆಯಿಂದ ವಂಚಿತರಾದ ಜಿಲ್ಲೆಯ ಜನರಿಗೆ ರೈಲು ಸೇವೆ ನೀಡಬೇಕು. ಬೆಂಗಳೂರಿಗೆ ಹಾಸನ-ಕುಣಿಗಲ್ ಮಾರ್ಗವಾಗಿ ರಾತ್ರಿ ರೈಲು ಆರಂಭಿಸಬೇಕು. ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಸಿಪಿಎಂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಅ.23ರಂದು ಬೆಳಗ್ಗೆ 10:30ಕ್ಕೆ ಬೈಂದೂರು ರೈಲು ನಿಲ್ದಾಣದಲ್ಲಿ ಮತ್ತು ಸಂಜೆ 4ಗಂಟೆಗೆ ಕುಂದಾಪುರದ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.