ಭಾರತದ ಗಡಿಯೊಳಕ್ಕೆ ನುಸುಳಿದ ಪಾಕ್ ಯುವಕನ ಬಂಧನ
Update: 2017-10-17 21:34 IST
ಜಮ್ಮು, ಅ. 17: ಇಲ್ಲಿನ ಆರ್‌ಎಸ್ ಪುರದ ಸುಚೇತ್‌ಘಡದ ಅಂತಾರಾಷ್ಟ್ರೀಯ ಗಡಿಗುಂಟದ ಬೇಲಿ ದಾಟಿದ ಪಾಕಿಸ್ತಾನದ 22 ವರ್ಷದ ಯುವಕನನ್ನು ಗಡಿ ಭದ್ರತಾ ಪಡೆ ಇಂದು ಬಂಧಿಸಿದೆ.
ವಿಚಾರಣೆ ವೇಳೆ ಹೆಸರು ಅಲಿ ರಾಜ ಎಂದು ಆತ ಹೇಳಿದ್ದಾನೆ. ಆತ ಪಾಕಿಸ್ತಾನದ ಸಿಯಾಲ್‌ಕೋಟದ ಪಸರೂರಿನಲ್ಲಿ ಟೈಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ ಎಂದು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆತನಲ್ಲಿ ಪಾಕಿಸ್ತಾನದ ಕರೆನ್ಸಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂಜಾವಿನ ಮಬ್ಬಿನಲ್ಲಿ ಈ ವ್ಯಕ್ತಿ ಬೇಲಿಯಲ್ಲಿ ನುಸುಳುವುದನ್ನು ಗಡಿ ಭದ್ರತಾ ಪಡೆಗಳು ಗುರುತಿಸಿದವು ಹಾಗೂ ಕೂಡಲೇ ಬಂಧಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಪ್ರಮುಖ ಒಳನುಸುಳಿವಿಕೆ ಪ್ರಯತ್ನವೊಂದನ್ನು ವಿಫಲಗೊಳಿಸಿದ್ದ ಬಿಎಸ್‌ಎಫ್ ಪಾಕಿಸ್ತಾನ ಕಡೆಯಿಂದ ಅರ್ನಿಯಾ ವಲಯದ ಸಮೀಪದ ಐಬಿ ವರೆಗೆ ಕೊರೆಯಲಾಗಿದ್ದ ಸುರಂಗವೊಂದನ್ನು ಪತ್ತೆ ಹಚ್ಚಿದ್ದರು.