‘ಚಿಲ್ಲಿ ಲಿಮೊನ್’ ರೆಸ್ಟೋರೆಂಟ್‌ನಲ್ಲಿ ದೀಪಾವಳಿ ಕೊಡುಗೆ
Update: 2017-10-17 22:06 IST
ಮಂಗಳೂರು, ಅ. 17: ನಗರದ ಫಳ್ನೀರ್ ರಸ್ತೆಯ ಜೊಯಾಲುಕ್ಕಾಸ್ ಜ್ಯುವೆಲ್ಲರಿ ಎದುರಿನಲ್ಲಿ ಕಾರ್ಯಾಚರಿಸುತ್ತಿರುವ ‘ಚಿಲ್ಲಿ ಲಿಮೊನ್’ ರೆಸ್ಟೋರೆಂಟ್ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಿದೆ.
‘ಚಿಲ್ಲಿ ಲಿಮೊನ್’ನಲ್ಲಿ ಗ್ರಾಹಕರು ಒಂದು ಶೋರ್ಮಾ ಖರೀದಿಸಿದರೆ ಎರಡು ಶೋರ್ಮಾಗಳು ಉಚಿತ ಪಡೆಯಲಿದ್ದಾರೆ. ಹಾಗೆಯೇ ಒಂದು ಬರ್ಗರ್‌ಗೆ ಇನ್ನೊಂದು ಬರ್ಗರ್ ಉಚಿತವಾಗಿದೆ. ಇದರ ಸಹಿತ ‘ಚಿಲ್ಲಿ ಲಿಮೊನ್’ ರೆಸ್ಟೋರೆಂಟ್‌ನಲ್ಲಿ ದೊರೆಯುವ ತನಿಸುಗಳ ಪೈಕಿ ಕೆಲವು ತನಿಸುಗಳಿಗೂ ವಿಶೇಷ ಕೊಡುಗೆ ಇವೆ. ಸಂಸ್ಥೆಯ ಈ ಕೊಡುಗೆಯು ಅ.18ರ ಮಧ್ಯಾಹ್ನ 12 ಗಂಟೆಯಿಂದ ಅ. 20ರವರೆಗೆ ಗ್ರಾಹಕರು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪಾಲುದಾರ ಫೈಝಲ್ ತಿಳಿಸಿದ್ದಾರೆ.
ಬರ್ಗರ್, ಶೋರ್ಮಗಳು ಸಾಮಾನ್ಯ ಜನರಿಗೂ ಸಿಗುವಂತಾಗಲು ಸಂಸ್ಥೆಯಿಂದ ಈ ಕೊಡುಗೆ ನೀಡಲಾಗಿದೆ. ದೀಪಾವಳಿ ಕೊಡುಗೆ ಮಾತ್ರವಲ್ಲದೆ, ಭವಿಷ್ಯದ ದಿನಗಳಲ್ಲೂ ಇಂತಹ ಕೊಡುಗೆಗಳು ಗ್ರಾಹಕರಿಗೆ ನೀಡುವುದಾಗಿ ಅವರು ತಿಳಿಸಿದರು.