ತೋಡಿನ ನೀರಿನಲ್ಲಿ ಬಿದ್ದು ಮೃತ್ಯು
Update: 2017-10-17 23:03 IST
ಬೈಂದೂರು, ಅ.17: ಯಡ್ತರೆ ಗ್ರಾಮದ ಬಂಕೇಶ್ವರ ತೋಡಿನ ನೀರಿನಲ್ಲಿ ಸುಮಾರು 30 ರಿಂದ 35 ವರ್ಷ ವಯಸ್ಸಿನ ಓರ್ವ ಗಂಡಸಿನ ಮೃತದೇಹವು ಮಗುಚಿ ಬಿದ್ದ ಸ್ಥಿತಿಯಲ್ಲಿ ಇಂದು ಬೆಳಗಿನ ಜಾವ ಪತ್ತೆಯಾಗಿದೆ.
ಮೃತ ವ್ಯಕ್ತಿಯು ಬೈಂದೂರಿನಿಂದ ಬಂಕೇಶ್ವರ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತೋಡಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಉಸಿರು ಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.