ವಿಟ್ಲ : ಅಸರ್ಮಕ ಮರಳು ನೀತಿಯ ವಿರುದ್ಧ ಧರಣಿ

Update: 2017-10-17 18:04 GMT

ವಿಟ್ಲ, ಅ. 17: ದ.ಕ. ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಅಭಾವ, ಅಕ್ರಮ ಮರಳು ಸಾಗಾಟ, ಅಸರ್ಮಕ ಮರಳು ನೀತಿಯ ವಿರುದ್ಧ ವಿಟ್ಲ ನಗರ ಬಿಜೆಪಿ ವತಿಯಿಂದ ವಿಟ್ಲದ ನಾಡಕಚೇರಿ ಸಮೀಪ ಧರಣಿ ನಡೆಯಿತು.

ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವರು ದಿನಕ್ಕೊಂದು ಬೇಜಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಾ ರಾಜ್ಯದ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಇದು ತುಘಲಕ್ ಸರ್ಕಾರವಾಗಿದ್ದು, ವಿವಿಧ ಭಾಗ್ಯಗಳ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ಮರಳು ದಂಧೆ ಹಾಗೂ ಗಾಂಜಾ ಮಾಫಿಯಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೇರವಾಗಿ ಭಾಗಿಯಾಗಿದ್ದಾರೆ. ಇಂದಿರಾ ಕ್ಯಾಂಟಿನ್ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಉದ್ಯೋಗ ನೀಡಿದ್ದಾರೆ. ಅರಣ್ಯ ಸಚಿವರ ಊರಿನಲ್ಲಿ ಅರಣ್ಯ ಮಾಫಿಯಾ ನಡೆಯುತ್ತಿದೆ. ಈ ಸರ್ಕಾರ ಭ್ರಷ್ಟಚಾರದಿಂದ ಕೂಡಿ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಜಿಲ್ಲೆಯ ಕಾರ್ಮಿಕರು ಮರಳು ಸಮಸ್ಯೆಯಿಂದ ಕೆಲಸವಿಲ್ಲದೇ ದಿನದೂಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಈ ಹಿಂದೆ ಪ್ರತಿಭಟನೆ ನಡೆಸಿದ್ದರೂ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಪದ್ಮನಾಭ ಕೊಟ್ಟಾರಿ, ಅರುಣ್ ಕುಮಾರ್ ಪುತ್ತಿಲ, ದೇವದಾಸ್ ಶೆಟ್ಟಿ, ಚೆನ್ನಪ್ಪ ಕೊಟ್ಯಾನ್, ಪುರುಷೋತ್ತಮ, ದಿನೇಶ್ ಅಮ್ಟೂರು, ಕೋಲ್ಪೆ ರಾಜಾರಾಮ್ ಶೆಟ್ಟಿ, ನಿತ್ಯಾನಂದ ನಾಯಕ್ ವಿಟ್ಲ, ಮೋಹನ್‌ದಾಸ ಉಕ್ಕುಡ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ರಾಮ್‌ದಾಸ್ ಶೆಣೈ, ಸದಸ್ಯರಾದ ರವಿಪ್ರಕಾಶ್, ಶ್ರೀಕೃಷ್ಣ, ಮಂಜುನಾಥ ಕಲ್ಲಕಟ್ಟ, ಲೋಕನಾಥ ಶೆಟ್ಟಿ, ಉಷಾ ಕೃಷ್ಣಪ್ಪ, ಜಯಂತ ನಾಯ್ಕ, ಚಂದ್ರವತಿ ಶೆಟ್ಟಿ, ಮತ್ತು ಇಂದಿರಾ ಅಡ್ಯಾಳಿ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು, ಸಂಕಪ್ಪ ಗೌಡ, ಉದಯ್ ಆಲಂಗಾರು, ವೀರಪ್ಪ ಗೌಡ, ರಾಜೇಶ್ ಬೊಬ್ಬೆಕೇರಿ, ಕರುಣಾಕರ ನಾಯ್ತೆಟ್ಟು, ನಾಗೇಶ್ ಬಸವನಗುಡಿ, ನರ್ಸಪ್ಪ ಪೂಜಾರಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News