ತಾಜುಲ್ ಉಲಮಾ ಎಜುಕೇಶನ್ ಸೆಂಟರ್‌ನಲ್ಲಿ ಮದ್ರಸ ಉದ್ಘಾಟನೆ

Update: 2017-10-18 08:37 GMT

ಮಂಗಳೂರು, ಅ.18: ಜಗತ್ತಿನ ಮೂಲೆ ಮೂಲೆಗೂ ಸುನ್ನತ್ ಜಮಾತಿನ ಆಶಯ ಮುಟ್ಟಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಉಪ ಯುಕ್ತವಾಗುವಂತೆ ಅಲ್ಲಲ್ಲಿ ಮದ್ರಸಗಳನ್ನು ನಿರ್ಮಿಸಿ ಧಾರ್ಮಿಕ ವಿದ್ಯೆ ಜೊತೆಗೆ ಲೌಕಿಕ ವಿದ್ಯೆಯನ್ನು ನೀಡಲಾಗುತ್ತಿದೆ ಎಂದು ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಭಿಪ್ರಾಯಪಟ್ಟರು.

ತಲಪಾಡಿ ಗ್ರಾಮದ ಹೊಸನಗರದಲ್ಲಿ ಎಸ್‌ವೈಎಸ್ ಕೆ.ಸಿ ರೋಡು ಸೆಂಟರ್ ಅಧೀನದ ತಾಜುಲ್ ಉಲಮಾ ಎಜುಕೇಶನ್ ಸೆಂಟರ್ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಮದ್ರಸ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿರು.

ಸಚಿವ ಯು.ಟಿ ಖಾದರ್ ಮಾತನಾಡಿ, ರಾಜ್ಯ ಸರಕಾರ ಧಾರ್ಮಿಕ ಕ್ಷೇತ್ರಕ್ಕೆ ಬಹಳಷ್ಟು ಅನುದಾನ ನೀಡುತ್ತಾ ಬಂದಿದೆ. ಮುಂದೆ ಸಂಸ್ಥೆಯ ಅಭಿವೃದ್ಧಿಗೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದರು.

ಎಸ್‌ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಪಿ ಹುಸೈನ್ ಸಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಜೆಯು ತಲಪಾಡಿ ವಲಯಾಧ್ಯಕ್ಷ ಅಬ್ದುರ್ರಶೀದ್ ಝೈನಿ ಅಲ್-ಕಾಮಿಲ್ ಕಾರ್ಯಕ್ರಮ ಉದ್ಘಾಟಿಸಿದರು. ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಅಳ್ವ ಶುಭಹಾರೈಸಿದರು.

ಈ ಸಂದರ್ಭ ಎಸ್‌ಜೆಎಂ ತಲಪಾಡಿ ವಲಯಾಧ್ಯಕ್ಷ ಪಿ.ಎಂ ಮುಹಮ್ಮದ್ ಮದನಿ, ಕೆ.ಸಿ.ರೋಡು ಮುದರ್ರಿಸ್ ಮುನೀರ್ ಸಖಾಫಿ, ಖತೀಬ್ ಹನೀಫ್ ಸಖಾಫಿ, ಉಚ್ಚಿಲ ರಹ್ಮಾನಿಯ ಮಸೀದಿಯ ಖತೀಬ್ ಅಕ್ಬರ್ ಅಲಿ ಸಅದಿ, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ತಲಪಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಝುಹುರಿ, ಹೊಸನಗರ ತಾಜುಲ್ ಉಲಮಾ ಮಸೀದಿಯ ಖತೀಬ್ ಅಬ್ದುಲ್ ಸಲಾಂ, ಎಸ್‌ಎಂಎ ಉಳ್ಳಾಲ ವಲಯ ಅಧ್ಯಕ್ಷ ಅಹ್ಮದ್ ಕುಂಞಿ ಹಾಜಿ ಪಿಲಿಕೂರು, ತಲಪಾಡಿ ವಲಯಾಧ್ಯಕ್ಷ ಅಬ್ಬಾಸ್ ಹಾಜಿ ಕೊಮರಂಗಳ, ಫಲಾಹ್ ವಿದ್ಯಾಸಂಸ್ಥೆ ಅಧ್ಯಕ್ಷ ಯು.ಬಿ ಮುಹಮ್ಮದ್ ಹಾಜಿ, ಕೋಟೆಕಾರ್ ಮರ್ಕಝುಲ್ ಹಿದಾಯ ಅಧ್ಯಕ್ಷ ಕೆ.ಎಂ. ಅಬ್ದುಲ್ಲ ಹಾಜಿ, ಉಚ್ಚಿಲ್ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಕೆ.ಎಸ್. ಬಾವಾ ಹಾಜಿ, ಮೇರಳಗುಡ್ಡೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಹೊಸನಗರ ಯು.ಟಿ. ಮಸೀದಿ ಅಧ್ಯಕ್ಷ ನಝೀರ್, ಮುಹಮ್ಮದ್ ಬಾವಾ ಉಪಸ್ಥಿತರಿದರು.

ಎಸ್‌ವೈಎಸ್ ಕೆ.ಸಿ. ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್ ಉಮರ್ ಮಾಸ್ಟರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ. ಫಾರೂಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News