ಭಟ್ಕಳಿ ಜಮಾಅತುಲ್ ಮುಸ್ಲಿಮೀನ್ ನ ಮಾಜಿ ಅಧ್ಯಕ್ಷ ಗಯಾಸುದ್ದೀನ್ ನಿಧನ

Update: 2017-10-19 11:14 GMT

ಮಂಗಳೂರು, ಅ.18: ಮಂಗಳೂರಿನ ಭಟ್ಕಳಿ ಜಮಾಅತುಲ್ ಮುಸ್ಲಿಮೀನ್ ನ ಮಾಜಿ ಅಧ್ಯಕ್ಷ ಗಯಾಸುದ್ದೀನ್ ಜುಬಾಪು ಸಾಹೇಬ್ (74) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಮಂಗಳೂರಿನ ಬಂದರ್ ರೋಡ್ ನಲ್ಲಿರುವ ಫೆರೋ ಸ್ಟೀಲ್ಸ್ ನ ಮಾಲಕರಾಗಿದ್ದ ಗಯಾಸುದ್ದೀನ್ ಸಾಹೇಬ್ ಮಂಗಳೂರು ಜಮಾಅತ್ ಗೆ ಒಳಪಟ್ಟವರಾಗಿ ದ್ದರು. ಜಮಾಅತ್ ಹಾಗು ಸಾಮಾಜಿಕ ಕ್ಷೇತ್ರಗಳಿಗೆ ಗಯಾಸುದ್ದೀನ್ ಅಪಾರ ಕೊಡುಗೆ ನೀಡಿದ್ದು, ಭಟ್ಕಳದ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಅಸರ್ ನಮಾಝ್ ನಂತರ ಬಂದರ್ ಸಮೀಪದ ಗುಂಡದ್ ಪಳ್ಳಿ ಮಸೀದಿಯ ಆವರಣದಲ್ಲಿ ದಫನ ಕಾರ್ಯ ನಡೆಸಲಾಯಿತು. ಭಟ್ಕಳ ಮುಸ್ಲಿಮ್ ಖಲೀಜ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಯೂನುಸ್ ಖಾಝಿಯಾ, ಮಜ್ಲಿಸ್-ಇ-ಇಸ್ಲಾಹ್ ವ ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿಯುದ್ದೀನ್ ಅಲ್ತಾಫ್ ಖರೂರಿ, ಸಮಾಜ ಸೇವಕ ಸಯಿದುದ್ದೀನ್ ಬ್ರಹ್ಮಾವರ ಸೇರಿದಂತೆ ಭಟ್ಕಳಿ ನಿವಾಸಿಗಳು, ಭಟ್ಕಳ್ ಜಮಾಅತುಲ್ ಮುಸ್ಲಿಮೀನ್ ಮಂಗಳೂರು ಇದರ ಸದಸ್ಯರು ಉಪಸ್ಥಿತರಿದ್ದರು.

ಸಂತಾಪ ಸಭೆ: ಮಂಗಳೂರು ಜಮಾಅತ್ ಹಾಸ್ಟೆಲ್ ನಲ್ಲಿ ಸಂತಾಪ ಸಭೆ ನಡೆಯಿತು. ಈ ಸಂದರ್ಭ ಮಂಗಳೂರು ಜಮಾಅತ್ ಅಧ್ಯಕ್ಷ ಎಸ್.ಎಂ.ಸೈಯದ್ ಅರ್ಶಾದ್, ಯೂನುಸ್ ಖಾಝಿಯಾ, ಮೊಹಿದ್ದೀನ್ ಅಲ್ತಾಫ್ ಖರೂರಿ , ಮೌಲಾನ ಮುಹಮ್ಮದ್ ಸಾಲಿಮ್ ಖಲೀಫಾ ನದ್ವಿ, ಜಮಾಅತ್ ಕಾರ್ಯದರ್ಶಿ ಇಮ್ತಿಯಾಝ್ ದಮ್ದಾ, ಮಸೂದ್ ರುಕ್ನದ್ದೀನ್, ಮುಸ್ಬಾ ಅನ್ಸಾರ್, ಸೈಯದ್ ಮಸೂದ್, ಎಸ್ಎಂ. ಅಶ್ಫಾಕ್, ಅಬ್ದುಲ್ಲಾ ಮುಸ್ಬಾ, ಅಶ್ರಫ್ ಸದಾ, ತಲ್ಹಾ ಅಕ್ರಮಿ, ಡಾ.ಸಿರಾಜ್ ಮೊಹ್ತೆಶಾಮ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News