ದೀಪಾವಳಿ ಸಂಭ್ರಮ: ಶ್ರೀಕೃಷ್ಣಮಠದಲ್ಲಿ ಸ್ವಾಮೀಜಿಗಳ ತೈಲಶಾಸ್ತ್ರ

Update: 2017-10-18 11:04 GMT

ಉಡುಪಿ, ಅ.18: ಉಡುಪಿ ಶ್ರೀಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ಇಂದು ತೈಲ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು.

ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಮಠದ ಪುರೋಹಿತ ವೇದಮೂರ್ತಿ ಗೋಪಾಲಕೃಷ್ಣ ಆಚಾರ್ಯರಿಂದ ಮತ್ತು ಉಳಿದ ಸ್ವಾಮೀಜಿಗಳಾದ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೊದೆ ಶ್ರೀ ವಿಶ್ವ ವಲ್ಲಬತೀರ್ಥ ಸ್ವಾಮೀಜಿ ಅವರಿಗೆ ಮತ್ತು ಭಕ್ತಾಧಿಗಳಿಗೆ ಪರ್ಯಾಯ ಸ್ವಾಮೀಜಿ ತೈಲ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನಡೆಸಿದರು.

ಸ್ವಾಮೀಜಿಗಳ ಕಬಡ್ಡಿ ಆಟ: ಕೃಷ್ಣಮಠದ ಭೋಜನ ಶಾಲೆಯಲ್ಲಿ ಎಣ್ಣೆ ಸ್ನಾನದ ಸಂದರ್ಭ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಸೋದೆ ಶ್ರೀವಿಶ್ವ ವಲ್ಲಬತೀರ್ಥ ಸ್ವಾಮೀಜಿ ಕಬಡ್ಡಿ ಆಡುವ ಮೂಲಕ ಎಲ್ಲರ ಗಮನ ಸೆಳೆದರು.

ವಿಶ್ವಪ್ರಸನ್ನರ ಜೊತೆ ವಿಶ್ವವಲ್ಲಬರು ಜಿದ್ದಿಗೆ ಬಿದ್ದರು. ಹತ್ತಾರು ಭಕ್ತರು ಎರಡು ಗುಂಪುಗಳಾಗಿ ಕಬಡ್ಡಿ ಆಡಿದರು. ಪೇಜಾವರ ಶ್ರೀಗಳು ಸೂಪರ್ ರೈಡ್ ಮಾಡುವ ಮೂಲಕ ತಂಡಕ್ಕೆ ಪಾಯಿಂಟ್ ತಂದರು. ಜಾರುವ ಮೈ ಮತ್ತು ನೆಲದಲ್ಲಿ ಕಬಡ್ಡಿ ಆಡಿದ್ದು ವಿಶೇಷವಾಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News