ತಾಜ್ ಮಹಲ್ ನಂತಹ ಸ್ಮಾರಕಗಳ ಬಗ್ಗೆ ಟೀಕಿಸುವುದನ್ನು ರಾಜಕಾರಣಿಗಳು ನಿಲ್ಲಿಸಬೇಕು

Update: 2017-10-18 11:51 GMT

ಹೊಸದಿಲ್ಲಿ, ಅ.18; ಮೊಗಲ್ ದೊರೆ ಶಹಜಹಾನ್ ನಿರ್ಮಿಸಿದ ತಾಜ್ ಮಹಲ್ ನಂತಹ ಸ್ಮಾರಕಗಳ ಬಗ್ಗೆ ಟೀಕಿಸುವುದನ್ನು ರಾಜಕಾರಣಿಗಳು ನಿಲ್ಲಿಸಬೇಕು ಎಂದು ಆರೆಸ್ಸೆಸ್ ನ ಅಂಗಸಂಸ್ಥೆ ಅಖಿಲ ಭಾರತೀಯ ಇತಿಹಾಸ್ ಸಂಕಲನ್ ಯೋಜನಾ ಹೇಳಿದೆ.

“ಇತಿಹಾಸವನ್ನು ರಾಜಕಾರಣಿಗಳು ಬರೆದಿಲ್ಲ. ಸಂಶೋಧನೆ ನಡೆಸುವುದು ಇತಿಹಾಸಕಾರರು ಹಾಗು ಪುರಾತತ್ವ ತಜ್ಷರ ಕೆಲಸವಾಗಿದೆ. ಭಾರತೀಯರ ಕಠಿಣ ಪರಿಶ್ರಮದಿಂದ ನಿರ್ಮಾಣಗೊಂಡ ತಾಜ್ ಮಹಲ್ ನ ಇತಿಹಾಸದ ಬಗ್ಗೆ ರಾಜಕಾರಣಿಗಳು ಹೇಳಿಕೆ ನೀಡಬಾರದು” ಎಂದು ಎಬಿಐಎಸ್ ವೈನ ಕಾರ್ಯದರ್ಶಿ ಬಾಲಮುಕುಂದ್ ಪಾಂಡೆ ಹೇಳಿದ್ದಾರೆ.

ತಾಜ್ ಮಹಲ್ ಕುರಿತಂತೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ನೀಡಿದ್ದ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತ್ತು. “ತಾಜ್ ಮಹಲ್ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದ್ದು, ಹಿಂದೂಗಳನ್ನು ಭಾರತದಿಂದ ನಿರ್ಮೂಲನೆಗೊಳಿಸಲು ಬಯಸಿದ್ದ ದೊರೆ ಇದನ್ನು ನಿರ್ಮಿಸಿದ್ದಾನೆ” ಎಂದವರು ಹೇಳಿದ್ದರು. ಸೋಮ್ ರ ಈ ಹೇಳಿಕೆಯ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾದ ನಂತರ ತಾನು ಮೊಗಲ್ ದೊರೆಗಳ ಬಗ್ಗೆ ಹೇಳಿಕೆ ನೀಡಿದ್ದೇನೆಯೇ ಹೊರತು ತಾಜ್ ಮಹಲ್ ಬಗ್ಗೆಯಲ್ಲ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News