ಈ ಪೌರ ಕಾರ್ಮಿಕರಿಗೆ ದೀಪಾವಳಿ ಇಲ್ಲ!

Update: 2017-10-18 13:26 GMT

ಮಂಗಳೂರು, ಅ.18: ಪೌರ ಕಾರ್ಮಿಕರ ಬಗ್ಗೆ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಎಷ್ಟೇ ಹೇಳಿದರೂ ಕೂಡ ಈ ಕಾರ್ಮಿಕರ ಬದುಕು ಮಾತ್ರ ಅತ್ಯಂತ ಶೋಚನೀಯವಾಗಿರುವುದಕ್ಕೆ ಇಲ್ಲಿನ ಚಿತ್ರಗಳೇ ಸಾಕ್ಷಿ.

ನಗರದ ಬಂದರ್ ಪೊಲೀಸ್ ಠಾಣಾ ವ್ಯಾಪ್ತಿಯ ಒಳಚರಂಡಿಯ ಗುಂಡಿಗೆ ಒಬ್ಬ ಕಾರ್ಮಿಕ ಇಳಿದು ತ್ಯಾಜ್ಯ ನೀರನ್ನು ಹೊರಗೆ ಚೆಲ್ಲುವ ಪ್ರಯತ್ನ ಮಾಡಿದರೆ ಇನ್ನೊಬ್ಬ ಕಾರ್ಮಿಕ ಆತನಿಗೆ ಸಹಾಯ ಮಾಡುವ ಅಮಾನವೀಯ ದೃಶ್ಯ ಪಾಲಿಕೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ.

ಬುಧವಾರ ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದರೆ ಈ ಕಾರ್ಮಿಕರು ಚರಂಡಿಯ ತ್ಯಾಜ್ಯವನ್ನು ಹೊರಚೆಲ್ಲುವುದರಲ್ಲಿ ನಿರತರಾಗಿರುವುದು ಮಾತ್ರ ವಿಪರ್ಯಾಸ.

ಬುದ್ಧಿವಂತರ ಜಿಲ್ಲೆ ಎಂದೇ ಪರಿಗಣಿಸಲ್ಪಟ್ಟ ಮಂಗಳೂರಿನಲ್ಲಿ ಕಾನೂನು ಮೀರಿ ನಡೆಯುವ ಇಂತಹ ಅಮಾನವೀಯತೆಗೆ ಕೊನೆ ಎಂಬ ಪ್ರಶ್ನೆಗೆ ಅಧಿಕಾರಿ ಗಳು, ಜನಪ್ರತಿನಿಧಿಗಳೇ ಉತ್ತರಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News