ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಮಾವೇಶ

Update: 2017-10-18 14:40 GMT

ಮಂಗಳೂರು, ಅ.18: ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹೋರಾಟವಾಗಿ ದಲಿತ ಚಳುವಳಿ ಬೆಳೆದು ಬರುತ್ತಿದೆ. ಅಸ್ಪಶ್ಯತೆಯ ಪಿಡುಗು ನಾಶವಾಗುವುದು ಸಾಮಾಜಿಕ ಚಳುವಳಿಗಳು ತೀವ್ರಗೊಂಡಾಗ ಮಾತ್ರ. ಆರ್ಥಿಕ ಪ್ರಶ್ನೆ ಹಾಗೂ ಸಾಮಾಜಿಕ ಪ್ರಶ್ನೆಗಳನ್ನು ಒಟ್ಟೊಟ್ಟಿಗೆ ಕೊಂಡೊಯ್ಯಬೇಕಿದೆ. ಜಾತಿ ತಾರತಮ್ಯ, ಮೂಡನಂಬಿಕೆಗಳು ವೈಭವೀಕರಣಗೊಳ್ಳುತ್ತಿವೆ. ಧಾರ್ಮಿಕ ಕಂದಾಚಾರಗಳು ಮನುಷ್ಯತ್ವವನ್ನು ಕಳಕೊಳ್ಳುವಂ ತಾಗಿಸಿದೆ ಎಂದು ದಲಿತ ಹಕ್ಕುಗಳ ಸಮಿತಿಯ ನಾಯಕ ಕೃಷ್ಣಪ್ಪಕೊಂಚಾಡಿ ಹೇಳಿದರು.

ಮಂಗಳೂರಿನಲ್ಲಿ ನಡೆದ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶವ್ಯಾಪಿಯಾಗಿ ದಲಿತರ ಮೇಲೆ ದೌರ್ಜನ್ಯ ಜಾಸ್ತಿಯಾಗಿದೆ. ಆಹಾರದ ಹಕ್ಕಿನ ಮೇಲೆ ದಾಳಿ ನಡೆಯುವುದು ಸಾಮಾನ್ಯ ಆಗಿದೆ. ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯನ್ನು ಬಲಪಡಿಸುವ ಬದಲು ಬಲಹೀನಗೊಳ್ಳುತ್ತಿದೆ ಎಂದು ಕೃಷ್ಣಪ್ಪ ಕೊಂಚಾಡಿ ನುಡಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಗಿರಿಜಾ ಮೂಡುಬಿದಿರೆ ವಹಿಸಿದ್ದರು.

ದಲಿತ ಹಕ್ಕಗಳ ಸಮಿತಿಯ ಜಿಲ್ಲಾಧ್ಯಕ್ಷರಾಗಿ ತಿಮ್ಮಯ್ಯ ಕೊಂಚಾಡಿ, ಉಪಾಧ್ಯಕ್ಷರಾಗಿ ನಾರಾಯಣ ತಲಪಾಡಿ, ಕಿಶೋರ್ ಪೊರ್ಕೊಡಿ, ಪ್ರಧಾನ ಕಾರ್ಯದರ್ಶಿಯಾಗಿ ಗಿರಿಜಾ ಮೂಡುಬಿದಿರೆ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣ ತಣ್ಣೀರುಬಾವಿ, ಪ್ರಶಾಂತ್ ಎಂ.ಬಿ. ಆಯ್ಕೆಯಾದರು.
ಪ್ರಶಾಂತ್ ಎಂ.ಬಿ. ಸ್ವಾಗತಿಸಿದರು. ಕಿಶೋರ್ ಪೊರ್ಕೋಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News