ಉತ್ತರಪ್ರದೇಶದ ಸರ್ಕಾರದ 2018ರ ಕ್ಯಾಲೆಂಡರ್‍ನಲ್ಲಿ ತಾಜ್‍ಮಹಲ್ ಗೆ ಸ್ಥಾನ

Update: 2017-10-18 17:27 GMT

ಲಕ್ನೋ, ಅ.18: ಕಳೆದ ಕೆಲ ದಿನಗಳಿಂದ ವಿಶ್ವವಿಖ್ಯಾತ ತಾಜ್‍ಮಹಲ್ ಬಗ್ಗೆ ಬಿಜೆಪಿಯ ಕೆಲ ನಾಯಕರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ನಡುವೆಯೇ  ಉತ್ತರ ಪ್ರದೇಶ ಸರ್ಕಾರದ 2018ರ ಕ್ಯಾಲೆಂಡರ್‍ನಲ್ಲಿ ತಾಜ್ ಮಹಲ್ ಗೆ ಸ್ಥಾನ ನೀಡಲಾಗಿದೆ. 

17ನೇ ಶತಮಾನದ ಈ ವಿಶ್ವಕೌತುಕದ ಕಟ್ಟಡ, ರಾಜ್ಯ ಮಾಹಿತಿ ಇಲಾಖೆ ಹೊರತರುವ 2018ರ ಕ್ಯಾಲೆಂಡರ್‍ನಲ್ಲಿ ಜುಲೈ ತಿಂಗಳಲ್ಲಿ ಸ್ಥಾನ ಪಡೆದಿದೆ. ಗೋರಖ್‍ಪುರದ ಗೋರಖನಾಥ್ ದೇವಾಲಯ ಕೂಡಾ ದಿನದರ್ಶಿಕೆಯಲ್ಲಿ ಸ್ಥಾನ ಪಡೆದಿದೆ. ಗೋರಖ್‍ನಾಥ್ ಮಠದ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಮುಖ ಐತಿಹಾಸಿಕ ಸ್ಥಳಗಳ ಚಿತ್ರದ ಜತೆಗೆ, ಬಿಜೆಪಿಯ ಜನಪ್ರಿಯ 'ಸಬ್ಕಾ ಸಾತ್- ಸಬ್ಕಾ ವಿಕಾಸ್- ಯುಪಿ ಗವರ್ನ್‍ಮೆಂಟ್ ಕಾ ಸತತ್ ಪ್ರಯಾಸ್' ಎಂಬ ಘೋಷಣೆಯನ್ನೂ ಈ ಕ್ಯಾಲೆಂಡರ್ ಒಳಗೊಂಡಿದೆ. ಕ್ಯಾಲೆಂಡರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಚಿತ್ರ ಕೂಡಾ ರಾರಾಜಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News