ಮೂಳೂರು: ವಿಶಿಷ್ಠವಾಗಿ ದೀಪಾವಳಿ ಆಚರಿಸಿದ ಯುವಕರು

Update: 2017-10-18 17:36 GMT

ಪಡುಬಿದ್ರೆ, ಅ. 18: ದೀಪಾವಳಿ ಎಂದಾಗ ಪಟಾಕಿ ಸಿಡಿಸಿ ಸಂಭ್ರಮಿಸುವ ಈ ಕಾಲದಲ್ಲಿ ಮೂಳೂರಿನ ಯುವಕರು ಮಾತ್ರ ದೀಪಾವಳಿ ಹಬ್ಬದ ದಿನದಂದು ಆಯ್ದ 25 ಮನೆಗಳಿಗೆ 25 ಕಿಲೋ ಅಕ್ಕಿ, ಐದು ಕಿಲೋ ಬೆಳ್ತಿಗೆ ಅಕ್ಕಿ, ಒಂದು ಲೀಟರ್ ಎಳ್ಳೆಣ್ಣೆ ಹಾಗೂ ಬೆಲ್ಲಯನ್ನು ವಿತರಿಸಿ ಉತ್ತಮ ಸಮಾಜಕ್ಕೆ ಮುನ್ನುಡಿ ಬರೆದಿದ್ದಾರೆ.

ಕಾಪು ಸಮೀಪದ ಮೂಳೂರಿನ ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು ವತಿಯಿಂದ ಈ ಬಾರಿ ದೀಪಾವಳಿ ಹಬ್ಬದಿಂದ ಬಡವರಾರೂ ವಂಚಿತರಾಗ ಬಾರದೆಂಬ ಇರಾದೆಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಸದಾ ಎಲೆ ಮರೆಯ ಕಾಯಿಯಂತೆ ಮೂಳೂರಿನ ಹಿಂದೂ ರಕ್ಷಾ ವಲ್ಫೇರ್ ಟ್ರಸ್ಟ್ ಕಾರ್ಯವೆಸಗುತ್ತಿದೆ. ಬಡ, ಅಶಕ್ತ ಕುಟುಂಬಗಳನ್ನು ಗುರುತಿಸಿ ಆ ಕುಟುಂಬಕ್ಕೆ ಧನ ಸಹಾಯ ನೀಡಿ ಅವರ ಕಷ್ಠದಲ್ಲಿ ನಾವೆಲ್ಲರೂ ಇದ್ದೇವೆ ಎಂದು ಅವರ ಬೆಂಬಲಕ್ಕೆ ನೀಡುವ ಸಂಘಗಳಲ್ಲಿ ಹಿಂದೂ ರಕ್ಷಾ ವಲ್ಫೇರ್ ಟ್ರಸ್ಟ್ ಗಮನಸೆಳೆದಿದೆ.

ಈ ಸಂದರ್ಭ ಹಿಂದೂ ರಕ್ಷಾ ವಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಧೀರೇಶ್ ಮೂಳೂರು ಮಾತನಾಡಿ, ದೀಪಾವಳಿ ಹಬ್ಬ ನಮ್ಮೆಲ್ಲರ ಮನಗಳನ್ನು ಬೆಸೆಯುವ ಹಬ್ಬ. ಉಳ್ಳವರು ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಿದರೆ, ಬಡವರು ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ನಮ್ಮ ಸಂಸ್ಥೆ ದೀಪಾವಳ ಹಬ್ಬವನ್ನು ಎಲ್ಲರೂ ಸಂತೋಷದಿಂದ ಆಚರಿಸೊಣ ಎಂದು ನಾವು ಆಯ್ದ 25 ಬಡವರ ಮನೆಗಳಿಗೆ ನಿತ್ಯೋಪಯೋಗಿ ವಸ್ತುಗಳನ್ನು ನೀಡುತ್ತಿದ್ದೇವೆ. ನಾವೇನೂ ಹಣವಂತರಲ್ಲ. ದಾನಿಗಳಿಂದ ಪಡೆದ ದಾನರೂಪದಿಂದ ಪಡೆದವುಗಳನ್ನು ಬಡವರಿಗೆ ನೀಡುತ್ತೇವೆ. ನಮ್ಮೀ ಸಂಸ್ಥೆಯ ಎಲ್ಲಾ ಸದಸ್ಯರ ಬೆವರ ಹನಿ ಈ ಕೊಡುಗೆಯಲ್ಲಿದೆ ಎಂದೂ ಧೀರೇಶ್ ತಿಳಿಸಿದ್ದಾರೆ.

ದುಬೈ ಸಂಚಾಲಕ ಪ್ರಶಾಂತ್ ಸುವರ್ಣರವರು ನಿತ್ಯೋಪಯೋಗಿ ವಸ್ತುಗಳ ವಿತರನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಅಶೋಕ್ ಪುತ್ರನ್, ಮಧುಕಿರಣ್, ಪ್ರತೀಕ್ ಸುವರ್ಣ, ಸುಕೇಶ್ ಮೂಳೂರು, ಜೀತೇಶ್ ಕುಮಾರ್, ನಾಗೇಶ್ ಅಮೀನ್, ಸುನೀಲ್ ಕರ್ಕೇರಾ, ಪ್ರಕಾಶ್ ಆಚಾರ್ಯ, ಸುರೇಶ್ ಮೂಳೂರು ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News