ಹಸಿವೆಯಿಂದ ಮೃತಪಟ್ಟ ಬಾಲಕಿಯ ಬಳಿ ಆಧಾರ್ ಕಾರ್ಡ್ ಇತ್ತು: ಯುಐಡಿಎಐ

Update: 2017-10-19 13:49 GMT

ಹೊಸದಿಲ್ಲಿ, ಅ.19: ಹಸಿವೆಯಿಂದ ಮೃತಪಟ್ಟ ಜಾರ್ಖಂಡ್ ನ ಬಾಲಕಿಯ ಬಳಿ ಆಧಾರ್ ಕಾರ್ಡ್ ಇತ್ತು ಎಂದು ಹೇಳಿರುವ ವಿಶಿಷ್ಟ ಗುರುತು ಅಭಿವೃದ್ಧಿ ಪ್ರಾಧಿಕಾರ (ಯುಐಡಿಎಐ) ಬಾಲಕಿಯ ಕುಟುಂಬಕ್ಕೆ ಸೌಲಭ್ಯಗಳನ್ನು ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದೆ.

ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣ ಕುಟುಂಬಕ್ಕೆ ಪಡಿತರ ಸಿಗದೆ ಬಾಲಕಿ ಹಸಿವೆಯಿಂದ ಮೃತಪಟ್ಟಿದ್ದಾಳೆ ಎಂದು ಆಹಾರದ ಹಕ್ಕು ಆಂದೋಲನದ ಕಾರ್ಯಕರ್ತರು ಆರೋಪಿಸಿದ್ದರು.

ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ,  2013ರಿಂದಲೇ ಬಾಲಕಿಯ ಕುಟುಂಬದ ಬಳಿ ಆಧಾರ್ ಕಾರ್ಡ್ ಇತ್ತು. ಆಧಾರ್ ಕಾಯ್ದೆಯ 7ನೆ ಸೆಕ್ಷನ್ ಪ್ರಕಾರ, ಆಧಾರ್ ಕಾರ್ಡ್ ಅಥವಾ ಧೃಡೀಕರಣದ ಆಧಾರದಲ್ಲಿ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದರು.

“ಈ ಘಟನೆಯ ಹಿಂದಿರುವ ವಿಷಯಗಳನ್ನು ಪತ್ತೆಹಚ್ಚಲು ಜಾರ್ಖಂಡ್ ಸರಕಾರ ಈಗಾಗಲೇ ಆದೇಶಿಸಿದೆ. ಆಧಾರ್ ಕಾರ್ಡ್ ಇದ್ದರೂ ಸೌಲಭ್ಯಗಳನ್ನು ನಿರಾಕರಿಸಿರುವವರು ಈ ಘಟನೆಗೆ ಜವಾಬ್ದಾರರಾಗಿದ್ದಾರೆ. ಇಂತಹವರ ವಿರುದ್ಧ ಕ್ರಮ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News