ಉಡುಪಿ: ಮುಸ್ಲಿಂರಿಂದ ದೀಪಾವಳಿ ಆಚರಣೆ

Update: 2017-10-19 16:48 GMT

ಉಡುಪಿ, ಅ.19: ಉಡುಪಿ ಜಿಲ್ಲಾ ಸಮಸ್ತ ಮುಸ್ಲಿಂ ಬಾಂಧವರ ಪರವಾಗಿ ನಗರದ ಸರ್ವಿಸ್ ಬಸ್‌ನಿಲ್ದಾಣದ ಕ್ಲಾಕ್ ಟವರ್ ಸುತ್ತ ಮಣ್ಣಿನ ನೂರಾರು ಹಣತೆ ದೀಪವಿಟ್ಟು ದೀಪಾವಳಿಯನ್ನು ಗುರುವಾರ ಸಂಜೆ ಸಂಭ್ರಮದಿಂದ ಆಚರಿಸಿದರು.

ನೆಲ ಚಕ್ರ, ಮಳೆ ಬತ್ತಿ ಸಹಿತ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿದ ಮುಸ್ಲಿಂ ಬಾಂಧವರು ದೀಪಾವಳಿಯ ಶುಭಾಶಯಗಳ ವಿನಿಮಯ ಮಾಡಿಕೊಂಡರು.

ಕ್ಲಾಕ್ ಟವರ್ ಸುತ್ತ ಇಟ್ಟ ನೂರಾರು ಮಣ್ಣಿನ ಹಣತೆಗೆ ದೀಪದಿಂದ ದೀಪ ಹೊತ್ತಿಸಿ, ಭಾರತ್ ಮಾತಾಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿದ ಇವರು ದೀಪಾವಳಿ ಸಂಭ್ರಮದ ಖುಷಿಯನ್ನು ಅನುಭವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಜಾತಿ, ಮತ, ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಈ ಕಾಲಘಟ್ಟದಲ್ಲಿ ಸೌಹಾರ್ದತೆ ಕಾಪಾಡಬೇಕಾದ ಅಗತ್ಯವಿದೆ. ನಾವೆಲ್ಲ ಒಂದೇ ಎನ್ನುವ ಆಶಯ ನಮ್ಮಲ್ಲಿ ಮೂಡಿ ಬಲಿಷ್ಠ ಭಾರತದ ನಿರ್ಮಾಣ ವಾಗಬೇಕಿದೆ ಎಂದರು.

ಸರಕಾರ ಪ್ರತ್ಯೇಕ ಜಾಗ ನೀಡಲಿ: ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಹಬ್ಬ ಹರಿದಿನಗಳನ್ನು ಆಚರಿಸಿ ಸೌಹಾರ್ದ ಮೆರೆಯುವ ನಿಟ್ಟಿನಲ್ಲಿ ಸರಕಾರ ಪ್ರತಿ ಜಿಲ್ಲೆಗಳಲ್ಲೂ ಸೂಕ್ತವಾದ ಜಾಗವನ್ನು ಮೀಸಲಿಡಬೇಕೆಂದು ಅವು ಸರಕಾರವನ್ನು ಆಗ್ರಹಿಸಿದರು.

 ಸರಕಾರ ಪ್ರತ್ಯೇಕ ಜಾಗ ನೀಡಲಿ: ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಹಬ್ಬ ಹರಿದಿನಗಳನ್ನು ಆಚರಿಸಿ ಸೌಹಾರ್ದ ಮೆರೆಯುವ ನಿಟ್ಟಿನಲ್ಲಿ ಸರಕಾರ ಪ್ರತಿ ಜಿಲ್ಲೆಗಳಲ್ಲೂ ಸೂಕ್ತವಾದ ಜಾಗವನ್ನು ಮೀಸಲಿಡಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದರು. ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದಲ್ಲಿ ಇಪ್ತಾರ್ ಕೂಟ ಆಯೋಜಿಸಿ ಸಮಾಜದಲ್ಲಿ ಸಾಮರಸ್ಯದ ಸಂದೇಶ ಬಿತ್ತಿದಂತೆ, ನಾವು ಕೂಡಾ ಅವರಿಂದ ಪ್ರೇರಣೆ ಪಡೆದು ಅಂಧಕಾರ ದೂರ ಮಾಡುವ ದೀಪಾವಳಿಯನ್ನು ಆಚರಿಸುತಿದ್ದೇವೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ  ದೊಡ್ಡಣಗುಡ್ಡೆ, ಶಾಹೀಲ್, ಅಮ್ಜದ್ ಹೆಜಮಾಡಿ, ಮೊಹಮ್ಮದ್ ಇರ್ಫಾನ್, ಮುಹಮ್ಮದ್, ಮನ್ಸೂರ್, ಜಿಲ್ಲಾ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ, ಮೈಕಲ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News