ಎಸ್ಐಒ ಸಂಸ್ಥಾಪನಾ ದಿನ: ಧ್ವಜಾರೋಹಣ, ಬಡ ಕುಟುಂಬಕ್ಕೆ ರೇಷನ್ ವಿತರಣೆ

Update: 2017-10-19 18:00 GMT

ಬಂಟ್ವಾಳ, ಅ. 19: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ ಐ ಒ)  ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಎಸ್ ಐ ಒ ಪಾಣೆಮಂಗಳೂರು ಶಾಖೆಯ ವತಿಯಿಂದ ಪಾಣೆಮಂಗಳೂರು ಬಸ್ ನಿಲ್ದಾಣದ ಬಳಿ ಧ್ವಜಾರೋಹಣ ನಡೆಸಲಾಯಿತು.

ಎಸ್ ಐ ಒ ಮಾಜಿ ದ.ಕ. ಜಿಲ್ಲಾ ಸಂಚಾಲಕ ಅಬ್ದುಲ್ ಜಲಾಲ್ ಚೆಂಡಾಡಿ ಧ್ವಜಾರೋಹಣ ನೆರವೇರಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ಮುಖ್ತಾರ್ ಅಹ್ಮದ್ ಮಾತನಾಡಿ, ಎಸ್ ಐ ಒ ಸಂಘಟನೆಯು ಸಮಾಜಕ್ಕೆ ಉತ್ತಮ ನಾಯಕರನ್ನು ನೀಡಿದ್ದು, ಅವರಿಂದು ಉನ್ನತಮಟ್ಟದ ವ್ಯಕ್ತಿಗಳಾಗಿ ಗುರುತಿಸಿಕೊಂಡು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳದೆ ಮುಂದುವರಿಯುತ್ತಿರುವುದರಿಂದ ಎಸ್ ಐ ಓ ಇಂದು ರಾಷ್ಟಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ ಎಂದರು.

ಎಸ್ ಐ ಒ ರಾಜ್ಯ ಕಾರ್ಯದರ್ಶಿ ದಾನಿಶ್ ಪಾಣೆಮಂಗಳೂರು ಎಸ್ ಐ ಓ ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದರು. ಎಸ್ ಐ ಒ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ವೇಣೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ಅಬ್ದುಲ್ಲಾ ಚೆಂಡಾಡಿ, ಅಮಾನುಲ್ಲಾ ಖಾನ್ ತರೀಕೆರೆ, ಶಾಹುಲ್ ಹಮೀದ್ ಪರ್ಲಿಯಾ, ಎಸ್ ಐ ಓ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ತಮೀಝ್ ಅಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಮುಬಾರಿಶ್ ಚೆಂಡಾಡಿ ನಿರೂಪಿಸಿದರು. ರಿಝ್ವಾನ್ ಬೋಳಂಗಡಿ ಕಿರಾಅತ್ ಪಠಿಸಿದರು.

ಬಡ ಕುಟುಂಬಕ್ಕೆ ಮಾಸಿಕ ರೇಷನ್ ವಿತರಣೆ: 
ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಕುಕ್ಕಾಜೆ ಸರಕಾರಿ ಶಾಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಮೈದಾನದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಜಾರುಬಂಡಿ ಬಿದ್ದು, ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿರುವ ಕುಕ್ಕಾಜೆಯ ವಿದ್ಯಾರ್ಥಿ ಮುಹಮ್ಮದ್ ಶಾಹಿದ್ ನ ಕುಟುಂಬಕ್ಕೆ ಒಂದು ತಿಂಗಳ ರೇಷನ್ ಅನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News