ಪಾನೀರ್‌ನಲ್ಲಿ ಯೂತ್ ಟ್ಯಾಲೆಂಟ್-2017 ಕ್ರೀಡಾ ಸ್ಪರ್ಧೆ

Update: 2017-10-19 18:02 GMT

ಉಳ್ಳಾಲ, ಅ. 19: ಯುವಸಮುದಾಯ ಗಟ್ಟಿಮುಟ್ಟಾಗಿದ್ದರೆ ಸಮಾಜವೂ ಗಟ್ಟಿಯಾಗಿರುತ್ತದೆ, ಈ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಭಾಗವಹಿಸುವುದು ಸಹಕಾರಿ ಎಂದು ಪೆರ್ಮನ್ನೂರು ಸಂತ ಸೆಬಾಸ್ತಿಯನ್ ಚರ್ಚ್‌ನ ಧರ್ಮಗುರು ಫಾ.ಜೆ.ಬಿ.ಸಲ್ದಾನ ಅಭಿಪ್ರಾಯಪಟ್ಟರು. ವೈಸಿಎಸ್ ಸಂತ ಜೋಸೆಫ್ ವಾರ್ಡ್ ವತಿಯಿಂದ ಬುಧವಾರ ಪಾನೀರ್ ಚರ್ಚ್ ಮೈದಾನದಲ್ಲಿ ನಡೆದ ಉಳ್ಳಾಲ ವಲಯ ಚರ್ಚ್ ಮಟ್ಟದ ‘ಯೂತ್ ಟ್ಯಾಲೆಂಟ್-2017’ ಕ್ರೀಡಾಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಡಿ ದರ್ಜೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮಾತನಾಡಿ, ಕ್ರೀಡೆ ಎನ್ನುವುದು ಶಾಂತಿ, ಸೌಹಾರ್ದದ ಸಂದೇಶ ನೀಡುತ್ತದೆ. ಹೆಚ್ಚಿನ ಕ್ರೀಡೆಗಳಲ್ಲಿ ಮೊದಲು ಮತ್ತು ಎರಡನೇ ಸ್ಥಾನಿಗಳಿಗೆ ಬಹುಮಾ ನೀಡುತ್ತಾರೆ. ಆದರೆ ಕ್ರೀಡೆಯಲ್ಲಿ ಸೋಲು ಎಂಬುದೂ ಅವಿಭಾಜ್ಯ ಅಂಗವಾಗಿದೆ ಎಂದರು.

ಪಾನೀರ್ ಚರ್ಚ್ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಪೆರ್ಮನ್ನೂರು ಸಂತ ಸೆಬಾಸ್ತಿಯನ್ ಚರ್ಚ್‌ನ ಸಹಾಯಕ ಧರ್ಮಗುರು ಫಾ.ಲೇಝಿಲ್, ವೈಸಿಎಸ್ ಕಾರ್ಯದರ್ಶಿ ಅನಿಶಾ, ವಿನಿಡಿಕ್ಟ್ ಡಿಸೋಜ ಉಪಸ್ಥಿತರಿದ್ದರು.
ವೈಸಿಎಸ್ ಅಧ್ಯಕ್ಷೆ ಮಲಾಯಿಕ ಸ್ವಾಗತಿಸಿದರು. ವೈಸಿಎಸ್ ಸಚೇಕತ ಅಶ್ವಿನ್ ಮೊಂತೆರೋ ವಂದಿಸಿದರು. ಫಿಯೋನ ಫ್ರಾಂಕಿ ಕುಟಿನ್ಹಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News