ಇರಾ: ಹೈನುಗಾರಿಕೆ, ಸ್ವ ಉದ್ಯೋಗದ ಮಾಹಿತಿ ಕಾರ್ಯಕ್ರಮ

Update: 2017-10-19 18:04 GMT

ಕೊಣಾಜೆ, ಅ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ(ರಿ) ಇರಾ ಮುಡಿಪು ವಲಯ ಇದರ ವತಿಯಿಂದ ಲಾಭದಾಯಕ ಹೈನುಗಾರಿಕೆ ಮತ್ತು ಕೃಷಿ ಸ್ವ ಉದ್ಯೋಗದ ಬ್ಗೆ ತರಬೇತಿ ಹಾಗು ವಿಚಾರ ಸಂಕಿರಣ ಕಾರ್ಯಕ್ರಮವು ಭಾನುವಾರ ನಡೆಯಿತು.

  ಪ್ರಗತಿಪರ ಕೃಷಿಕರಾದ ಜಯರಾವ್ ಅಲ್ಕೀರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಷಕ್ಷ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಬಂಟ್ವಾಳ ತಾಲೂಕು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಕೃಷಿ ಮೇಲ್ವಿಚಾರಕರಾದ ನಾರಾಯಣ, ದ.ಕ.ಚಟುಕು ಸಾಹಿತ್ಯ ಗೌರವಾಧ್ಯಕ್ಷರಾದ ಇರಾ ನೇಮು ಪೂಜಾರಿ, ಮಡಿಪು ಪ್ರಗತಿ ಬಂದು ಸ್ವಸಾಹಯ ಸಂಗಳ ಒಕ್ಕೂಟದ ಅಧ್ಯಕ್ಷರಾದ ಕರುಣಾಕರ ಶೆಟ್ಟಿ, ನಿತ್ಯಾನಂದ ಪ್ರಭು, ರಮೇಶ್ ಶೆಟ್ಟಿ ಮೂಳೂರು, ಭಾಸ್ಕರ ಬೆಳ್ಚಾಡ, ಮನೋಜ್ ಇರಾ, ಜಯಪ್ರಕಾಶ್ ಕೆಂಜಿಲ, ಮಂಜನಾಥ ಕೋಟ್ಯಾನ್ ಇರಾ ಉಪಸ್ಥಿತರಿದ್ದರು.
ಮಂಗಳೂರು ಪಶು ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ ಭಟ್ ಸಂಪನ್ನೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು ಲಾಭದಾಯಕ ಹೈನುಗಾರಿಕೆ ಬಗ್ಗೆ ಉಪನ್ಯಾಸಕಿ ಅನುಸೂಯ ಅವರು ಮಾಹಿತಿ ನೀಡಿದರು.

ಇರಾ ಬಿ ಒಕ್ಕೂಟ ಸೇವಾ ಪ್ರತಿನಿಧಿ ಕವಿತಾ ಸ್ವಾಗತಿಸಿ, ಇರಾ ಎ ಒಕ್ಕೂಟ ಸೇವಾ ಪ್ರತಿನಿಧಿ ಶ್ವೇತಾ ವಂದಿಸಿದರು. ಮುಡಿಪು ವಲಯದ ವೇಲ್ವಿಚಾರಕಿ ಅಮಿತ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News