ಬಂಟ್ವಾಳ: ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳ ಬೀಳ್ಕೊಡುಗೆ

Update: 2017-10-19 18:07 GMT

ಬಂಟ್ವಾಳ, ಅ. 19: ಕಂದಾಯ ಮತ್ತು ಪೊಲೀಸ್ ಇಲಾಖೆ ಜೊತೆಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಬಂಟ್ವಾಳ ತಹಶೀಲ್ದಾರ್ ಪುರದಂರ ಹೆಗ್ಡೆ ತಿಳಿಸಿದ್ದಾರೆ.

ಬಿ.ಸಿ.ರೋಡಿನ ಖಾಸಗಿ ಹೊಟೇಲ್‌ನಲ್ಲಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸಿ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಅವರು ಮಾತನಾಡಿದರು.
ಪೊಲೀಸರು ತ್ಯಾಗ ಮನೋಭಾವದವರು. ಒತ್ತಡದ ನಡುವೆ ಕೆಲಸ ಮಾಡುವುದು ಕಷ್ಟಕರ ಎಂದರು.

ನಗರ ಠಾಣಾ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಮಂಗಳೂರಿಗೆ ಡಿಸಿಬಿ ಕಚೇರಿಗೆ ವರ್ಗಾವಣೆಗೊಂಡಿರುವ ರಕ್ಷೀತ್ ಎ.ಕೆ, ನಗರ ಠಾಣಾ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡಿರುವ ನಂದಕುಮಾರ್ ಬಂಟ್ವಾಳ ನಗರ ಠಾಣೆಯಲ್ಲಿ ಎಎಸ್ಸೈ ಕರ್ತವ್ಯ ನಿರ್ವಹಿಸಿ, ಪುತ್ತೂರು ಠಾಣೆಗೆ ಎಸ್ಸೈ ಆಗಿ ವರ್ಗಾವಣೆಗೊಂಡಿರುವ ಓಮನ ಮತ್ತು ಎಚ್.ಸಿ ಯಾಗಿ ಕೆಲಸ ನಿರ್ವಹಿಸಿ ಇದೀಗ ಎಎಸ್ಸೈ ಅಗಿ ಮುಂಬಡ್ತಿಯಾಗಿ ವರ್ಗಾವಣೆಗೊಂಡ ಶೇಷಮ್ಮ, ಎಎಸ್ಸೈ ಸುಬ್ರಾಯ ಗೌಡ, ರಾಮಚಂದ್ರ ಮತ್ತು ಪಿಸಿಯಿಂದ ಎಚ್.ಸಿ ಅಗಿ ಮುಂಬಡ್ತಿಯಾಗಿ ವರ್ಗಾವಣೆಗೊಂಡ ರಾಜು ಪೂಜಾರಿ, ರಾಜೇಶ, ಲೋಕೇಶ, ಕುಮಾರ, ವಿನೋದ್, ನಾಗರಾಜಪ್ಪ, ಸದಾಶಿವ ಶೆಟ್ಟಿ, ಚಿತ್ರಲೇಖ, ತುಂಗಮ್ಮ, ಅದ್ರಾಮ ಹಾಗೂ ಪಿ.ಸಿರೇವಣ್ಣ , ಪಿ.ಸಿ ಶಿವಶಂಕರ, ಪಿ.ಸಿ ಯೋಗೀಂದ್ರ, ಪಿ.ಸಿ ಪ್ರಶಾಂತ್, ಪಿ.ಸಿ ಅಸ್ಲಾಂ, ಪಿ.ಸಿಗೀತಾ, ಪಿ.ಸಿ ಗಂಗಾಧರ, ಪಿ.ಸಿ ಸುಬ್ರಮಣ್ಯ ಅವರನ್ನು ಬೀಳ್ಕೋಡಲಾಯಿತು.
ಸೇವಾಂಜಲಿ ಪ್ರತಿಷ್ಠಾನದ ಕೃಷ್ಣ ಕುಮಾರ್ ಪೂಂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 ವೇದಿಕೆಯಲ್ಲಿ ವಿಟ್ಲ ಠಾಣಾ ನಾಗರಾಜ್, ಎಸ್ಸೈ ಚಂದ್ರಶೇಖರ್, ಎಸ್ಸೈ ಪ್ರಸನ್ನ ಕುಮಾರ್, ಬೆಳ್ಳಾರೆ ಎಸ್ಸೈ ಈರಯ್ಯ, ನಗರ ಠಾಣಾ ಅಪರಾಧ ವಿಭಾಗದ ಎಸ್ಸೈ ಹರೀಶ್, ಟ್ರಾಫಿಕ್ ಠಾಣಾ ಎಸ್ಸೈ ಯಲ್ಲಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News