×
Ad

ರಾಹುಲ್ ಟ್ವಿಟ್ಟರ್ ಖಾತೆ ಸ್ವರೂಪ ಬದಲಿಸಲು ಚಿಂತನೆ

Update: 2017-10-20 19:52 IST

ಹೊಸದಿಲ್ಲಿ, ಅ.20: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲು ಸಿದ್ಧರಾಗಿರುವ ರಾಹುಲ್ ಗಾಂಧಿ, ತನ್ನ ಟ್ವಿಟ್ಟರ್ ಖಾತೆ ಇನ್ನಷ್ಟು ಜನತೆಗೆ ತಲುಪುವಂತಾಗಬೇಕು ಎಂದು ನಿರ್ಧರಿಸಿದ್ದು ಟ್ವಿಟ್ಟರ್ ಖಾತೆಯ ಐಡಿಯನ್ನು ಬದಲಿಸಲು ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ.

ರಾಹುಲ್‌ಗಾಂಧಿ ಟ್ವಿಟ್ಟರ್ ಖಾತೆಯ ಐಡಿಯನ್ನು ಸರಳಗೊಳಿಸುವ ಮೂಲಕ ದೇಶದ ಇನ್ನಷ್ಟು ಮತದಾರರನ್ನು ತಲುಪುವ ಹಾಗೂ ಈ ಮೂಲಕ ಪ್ರಧಾನಿ ಮೋದಿಗೆ ಸ್ಪರ್ಧೆ ಒಡ್ಡುವ ಚಿಂತನೆ ನಡೆಸಲಾಗಿದೆ. ಈ ಹಿಂದೆ ಸಾಮಾಜಿಕ ಮಾಧ್ಯಮಗಳ ಬಗ್ಗೆ ಅಷ್ಟೊಂದು ಒಲವು ಹೊಂದಿರದ ರಾಹುಲ್, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರ ಹಾಗೂ ರಾಜಕೀಯ ವೈರಿ ಪಕ್ಷ ಬಿಜೆಪಿಯನ್ನು ಅವಕಾಶ ಸಿಕ್ಕಾಗಲೆಲ್ಲಾ ಟ್ವಿಟ್ಟರ್ ನಲ್ಲಿ ಟೀಕಿಸುವ ಮೂಲಕ ಸಕ್ರಿಯವಾಗಿದ್ದಾರೆ.

 ರಾಹುಲ್ ಟ್ವಿಟ್ಟರ್ ಖಾತೆಯನ್ನು ಸರಳೀಕರಿಸುವ ಸಲಹೆಯನ್ನು ದಕ್ಷಿಣ ಭಾರತದ ಸಿನೆಮ ನಟಿ, ಇದೀಗ ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ದಿವ್ಯಸ್ಪಂದನ ಯಾನೆ ರಮ್ಯ ನೀಡಿರುವುದಾಗಿ ಹೇಳಲಾಗಿದೆ. ರಾಹುಲ್ ಗಾಂಧಿ ಈಗ 3.8 ಮಿಲಿಯನ್ ಟ್ವಿಟ್ಟರ್ ಬೆಂಬಲಿಗರನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News