ಆರೋಗ್ಯ ಕಾಪಾಡುವ ಸಲುವಾಗಿ ಮಕ್ಕಳನ್ನು ಸೆಗಣಿಯ ಮೇಲೆ ಮಲಗಿಸಿದರು!

Update: 2017-10-20 15:42 GMT

ಮಧ್ಯಪ್ರದೇಶ, ಅ.20: ಗೋವರ್ಧನ ಪೂಜೆಯ ಸಂದರ್ಭ ಮಕ್ಕಳನ್ನು ಸೆಗಣಿಯ ಮೇಲೆ ಮಲಗಿಸಿದ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಎಎನ್ ಐ ನ್ಯೂಸ್ ವರದಿ ಮಾಡಿದೆ.

ಬೇತುಲ್ ಜಿಲ್ಲೆಯ ಯಾದವ ಮೊಹಲ್ಲಾದಲ್ಲಿ ನಡೆದ ಗೋವರ್ಧನ ಪೂಜೆಯ ವೇಳೆ ಮಕ್ಕಳನ್ನು ಸಗಣಿಯ ಮೇಲೆ ಮಲಗಿಸಲಾಗಿತ್ತು ಎನ್ನಲಾಗಿದೆ.

ದೀಪಾವಳಿ ಹಬ್ಬದ ಸಂದರ್ಭ ಶಿಶುಗಳನ್ನು ಹಾಗು 14 ಅಥವಾ 15 ವರ್ಷದ ಮಕ್ಕಳನ್ನು ಸೆಗಣಿಯ ಮೇಲೆ ಮಲಗಿಸಲಾಗುತ್ತದೆ. ಇದರಿಂದಾಗಿ ಮಕ್ಕಳಿಗೆ ಉತ್ತಮ ಆರೋಗ್ಯ ದೊರಕುತ್ತದೆ ಹಾಗು ರೋಗಗಳಿಂದ ಅವರನ್ನು ಕಾಪಾಡುತ್ತದೆ ಎಂಬುದು ಇವರ ನಂಬಿಕೆಯಾಗಿದೆ.

“ಇದು ಸಂಪ್ರದಾಯಕ್ಕೆ ಸಂಬಂಧಿಸಿದ ಹಳೆಯ ಆಚರಣೆಯಾಗಿದೆ. ಹಿಂದೂ ಧರ್ಮದಲ್ಲಿ ಗೋವಿನ ಸೆಗಣಿಯನ್ನು ಪವಿತ್ರ ಎಂದು ಪರಿಗಣಿಸಲಾಗಿದ್ದು, ಪೂಜೆಗಳಲ್ಲಿ ಬಳಸಲ್ಪಡುತ್ತದೆ. ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಸಲುವಾಗಿ ಸೆಗಣಿಯ ಮೇಲೆ ಮಲಗಿಸಲಾಗುತ್ತದೆ” ಎಂದು ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ಕೈಲಾಶ್ ಯಾದವ್ ಹೇಳಿದ್ದಾರೆ.

“ಸೆಗಣಿಯಲ್ಲಿರುವ ಬ್ಯಾಕ್ಟೀರಿಯಾಗಳು ಚರ್ಮಕ್ಕೆ ಅಲರ್ಜಿ ಸಮಸ್ಯೆಯನ್ನುಂಟು ಮಾಡುತ್ತದೆ” ಎಂದು ವೈದ್ಯರೊಬ್ಬರು ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News