ಚರಂಡಿಗೆ ಬಿದ್ದ ಬೈಕ್ : ಸವಾರ ಮೃತ್ಯು
Update: 2017-10-20 21:16 IST
ಶಿರ್ವ, ಅ.20: ಬೈಕೊಂದು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಮೂಡು ಮಟ್ಟಾರು ಎಂಬಲ್ಲಿ ಅ.19ರಂದು ಬೆಳಗ್ಗೆ 10ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಉತ್ತರ ಕರ್ನಾಟಕದ ಕಾರ್ಮಿಕ ಗೌಡೇಶ ಎಂದು ಗುರುತಿಸ ಲಾಗಿದೆ. ಬೈಕ್ ಆಯತಪ್ಪಿರಸ್ತೆ ಬದಿಯಲ್ಲಿ ಕಲ್ಲು ಬಂಡೆಗಳಿರುವ ಚರಂಡಿಗೆ ಬಿದ್ದ ಪರಿಣಾಮ ಸವಾರ ಗೌಡೇಶ್ ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.