ಜುಗಾರಿ ಅಡ್ಡೆಗೆ ದಾಳಿ : ಇಬ್ಬರ ಬಂಧನ
Update: 2017-10-20 21:17 IST
ಕೋಟ, ಅ.20: ತೆಕ್ಕಟ್ಟೆ ಗ್ರಾಮದ ಕೊಮೆ ಸರ್ಕಲ್ ಬಳಿ ಅ.19ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕೊರವಾಡಿಯ ಉಮೇಶ್(30), ಕೊಮೆಯ ಸಂದೀಪ(28) ಎಂಬವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ದಾಳಿ ವೇಳೆ ಮೂರು ಮಂದಿ ಪರಾರಿಯಾಗಿದ್ದಾರೆ. ಬಂಧಿತರಿಂದ ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.