×
Ad

ದೀಪಾವಳಿಯಂದು ಹಿಂದೂಗಳನ್ನು ಅಭಿನಂದಿಸಿ ಪಾಕ್ ಪ್ರಧಾನಿ

Update: 2017-10-20 21:24 IST

ಇಸ್ಲಾಮಾಬಾದ್, ಅ. 20: ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಾಗೂ ತಾರತಮ್ಯ ಮುಕ್ತ ಸಮಾಜವನ್ನು ನಿರ್ಮಿಸಲು ಪಾಕಿಸ್ತಾನ ಸರಕಾರ ಬದ್ಧವಾಗಿದೆ ಎಂದು ಆ ದೇಶದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಹೇಳಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ದೇಶದ ಹಿಂದೂ ಸಮುದಾಯವನ್ನು ಅಭಿನಂದಿಸಿ ಗುರುವಾರ ನೀಡಿದ ಹೇಳಿಕೆಯಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

‘‘ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹಾಗೂ ಅವರ ಮೂಲಭೂತ ಹಕ್ಕುಗಳ ರಕ್ಷಣೆಗೆ ಪಾಕಿಸ್ತಾನ ಸರಕಾರ ಬದ್ಧವಾಗಿದೆ’’ ಎಂದು ಅವರು ಹೇಳಿದರು.

‘‘ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಪ್ರವಾದಿಯ ತತ್ವಗಳು ನಮಗೆ ಮಾರ್ಗದರ್ಶನ ನೀಡುತ್ತವೆ’’ ಎಂದು ಪಾಕ್ ಪ್ರಧಾನಿ ನುಡಿದರು.

‘‘ಈ ದಿನವನ್ನು ಆಚರಿಸುತ್ತಿರುವ ಎಲ್ಲರ ಬದುಕಿನಲ್ಲೂ ದೀಪಗಳ ಹಬ್ಬ ಸಂತೋಷ ಮತ್ತು ಶಾಂತಿಯನ್ನು ತರಲಿ ಎಂದು ನಾನು ಹಾರೈಸುತ್ತೇನೆ’’ ಎಂದರು.

‘‘ದ್ವೇಷ ಮತ್ತು ಹಿಂಸೆಯನ್ನು ಯಾವ ಧರ್ಮವೂ ಕಲಿಸುವುದಿಲ್ಲ ಎಂಬುದನ್ನು ನಾವು ಮರೆಯದಿರೋಣ. ವಾಸ್ತವದಲ್ಲಿ, ಪ್ರತಿ ಧರ್ಮವು ಶಾಂತಿ, ಸಾಮರಸ್ಯ ಮತ್ತು ಮಾನವತೆಯ ಪ್ರೀತಿಗಾಗಿ ಕರೆ ನೀಡುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News