×
Ad

ಚೀನಾ ಅಧ್ಯಕ್ಷರನ್ನು ಉಚ್ಚಾಟಿಸಲು ಪಕ್ಷೀಯರಿಂದ ಪಿತೂರಿ?

Update: 2017-10-20 22:27 IST

ಬೀಜಿಂಗ್, ಅ. 20: ಚೀನಾ ಕಮ್ಯುನಿಸ್ಟ್ ಪಾರ್ಟಿಯ ಹಲವಾರು ಹಿರಿಯ ಸದಸ್ಯರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರಿಂದ ಅಧಿಕಾರ ಕಸಿದುಕೊಳ್ಳುವ ಸಂಚು ರೂಪಿಸಿದ್ದರು ಎಂದು ಚೀನಾದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದು ಈಗ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಏಕತೆಯನ್ನು ಪ್ರದರ್ಶಿಸುವ ಆಡಳಿತಾರೂಢ ಪಕ್ಷದ ಪ್ರಯತ್ನಗಳಿಗೆ ವಿರುದ್ಧವಾಗಿದೆ.

ಕ್ಸಿ ಜಿನ್‌ಪಿಂಗ್ ಆರಂಭಿಸಿರುವ ಭ್ರಷ್ಟಾಚಾರ ವಿರುದ್ಧದ ಬೃಹತ್ ಕಾರ್ಯಾಚರಣೆಯಡಿ, ಸಂಚಿನಲ್ಲಿ ಭಾಗವಹಿಸಿರುವ ಪಕ್ಷದ ಸದಸ್ಯರನ್ನು ಬಂಧಿಸಲಾಗಿದೆ ಅಥವಾ ಜೈಲಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ಎರಡನೆ ಅವಧಿಗೆ ದೇಶದ ಅಧ್ಯಕ್ಷರಾಗುವುದನ್ನು ಜಿನ್‌ಪಿಂಗ್ ಎದುರು ನೋಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News