ಪುತ್ತೂರು: ಕಳವು ಪ್ರಕರಣದ ಆರೋಪಿ ಸೆರೆ
ಪುತ್ತೂರು,ಅ.21:ಎರಡು ತಿಂಗಳ ಹಿಂದಿನ ಕಳವು ಪ್ರಕರಣವನ್ನು ಭೇದಿಸಿರುವ ನಗರ ಠಾಣೆ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2017ರ ಆಗಸ್ಟ್ 17ರಂದು ಬೈಪಾಸ್‍ನ ಅಂಗಡಿಯೊಂದರಿಂದ ಕಳವು ನಡೆಸಲಾಗಿತ್ತು. ಆರೋಪಿ ಬೇಲೂರು ನಿವಾಸಿ ಔರಾನ್ ಆಲಿಯಾಸ್ ರಿಯಾಜ್ (27) ಎಂಬಾತನನ್ನು ಬಂಧಿಸಲಾಗಿದೆ.
ಮಾತಾಡುತ್ತಾ ಅಂಗಡಿ ಮಾಲೀಕನ ಚಿತ್ತವನ್ನು ಬೇರೆಡೆಗೆ ವಿಚಲಿತಗೊಳಿಸಿ, ಡ್ರಾವರ್‍ನಲ್ಲಿದ್ದ ನಗದನ್ನು ಕಳವು ಮಾಡಿದ್ದರು. ಸುಮಾರು 48 ಸಾವಿರ ರೂ. ಕಳವು ಮಾಡಲಾಗಿತ್ತು ಎಂದು ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಹಾಸನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ 6500 ರೂ. ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದಂತೆ ಇನ್ನಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಎಸ್‍ಐ ಚೆಲುವಯ್ಯ, ಎಎಸ್‍ಐ ಚಿದಾನಂದ್, ಸಿಬಂದಿಗಳಾದ ಸ್ಕರಿಯ, ಪ್ರಶಾಂತ್ ರೈ, ಪ್ರಸನ್ನ, ಮಂಜುನಾಥ್ ಕಾರ್ಯಾಚರಣೆ ನಡೆಸಿದ್ದಾರೆ.