ಪಾದಾಚಾರಿಗೆ ಬೈಕ್ ಢಿಕ್ಕಿ: ಗಾಯ
Update: 2017-10-21 18:27 IST
ಪುತ್ತೂರು,ಅ.21: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿ ನಡೆದಿದೆ.
ಸವಣೂರು ಗ್ರಾಮದ ಚಾರ್ವಾಕ ನಿವಾಸಿ ನಾರಾಯಣ(53) ಗಾಯಗೊಂಡವರು. ಗಾಯಾಳುವನ್ನು ಪುತ್ತೂರು ನಗರದ ಆಸ್ಪತ್ರಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಚಾಲಕ ಲೋಕನಾಥ ವಿರುದ್ದ ದೂರು ದಾಖಲಿಸಲಾಗಿದೆ.
ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.