×
Ad

ಅ.22ರಂದು ಮುಅಲ್ಲಿಂ ವಿಚಾರ ಸಂಕಿರಣ

Update: 2017-10-21 20:11 IST

ಉಡುಪಿ, ಅ.21: ಸುನ್ನೀ ಅಧ್ಯಾಪಕರ ಒಕ್ಕೂಟ(ಎಸ್‌ಜೆಎಂ) ಉಡುಪಿ ಜಿಲ್ಲೆ ಇದರ ವತಿಯಿಂದ ಜಿಲ್ಲಾ ಮುಅಲ್ಲಿಂ ವಿಚಾರ ಸಂಕಿರಣ ಅ.22ರಂದು ಬೆಳಿಗ್ಗೆ 9:30ಕ್ಕೆ ಕಾಪು ಜೆಸಿಐ ಭವನದಲ್ಲಿ ನಡೆಯಲಿದೆ.

 ಅಧ್ಯಕ್ಷತೆಯನ್ನು ಎಸ್‌ಜೆಎಂ ರಾಜ್ಯಾದ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ವಹಿಸಲಿರುವರು. ಅಖಿಲ ಭಾರತ ಸುನ್ನೀ ಶಿಕ್ಷಣಾ ಮಂಡಳಿಯ ಕಾರ್ಯದರ್ಶಿ ಪ್ರೊ.ಎ.ಕೆ.ಅಬ್ದುಲ್ ಹಮೀದ್ ಸಾಹಿಬ್ ಉದ್ಘಾಟಿಸಲಿರುವರು. ಡಾ. ಅಬ್ದುಲ್ ಅಝೀಝ್ ಫೈಝಿ ಚೆರ್ವಾಡಿ ವಿಷಯ ಮಂಡಿಸಲಿರುವರು. ಈ ವಿಚಾರ ಸಂಕಿರಣದಲ್ಲಿ ಜಿಲ್ಲೆಯ ಎಲ್ಲ ಮದ್ರಸದ ಸರ್ವ ಮುಅಲ್ಲಿಮರು ಭಾಗವಹಿಸಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ಇಬ್ರಾಹಿಂ ನಯೀವಿು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News