×
Ad

ಕಾಪು : ಪರಿವರ್ತಕ ಕೇಂದ್ರಕ್ಕೆ ಲಾರಿ ಢಿಕ್ಕಿ

Update: 2017-10-21 21:15 IST

ಕಾಪು, ಅ.21: ಮೂಡಬೆಟ್ಟು ಗ್ರಾಮದ ಅಂಬಿಕಾ ಟಿಂಬರ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ.20ರಂದು ಮಧ್ಯರಾತ್ರಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯ 100 ಕೆ.ವಿ.ಎ. ಬೀಡು ಪರಿವರ್ತಕ ಕೇಂದ್ರ ಜಖಂಗೊಂಡಿದ್ದು, ಇದರಿಂದ ಮೆಸ್ಕಾಂ ಇಲಾಖೆಗೆ 2,50,000ರೂ. ನಷ್ಟ ಉಂಟಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News