ಡಬ್ಲುಎಚ್‌ಒ ಸದ್ಭಾವನಾ ರಾಯಭಾರಿಯಾಗಿ ರಾಬರ್ಟ್ ಮುಗಾಬೆ

Update: 2017-10-21 15:50 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಅ. 21: ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಸದ್ಭಾವನಾ ರಾಯಭಾರಿಯನ್ನಾಗಿ ನೇಮಿಸಿರುವುದಕ್ಕೆ ಮಾನವಹಕ್ಕು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದೆ.

ಉರುಗ್ವೆಯಲ್ಲಿ ಬುಧವಾರ ನಡೆದ ಸಾಂಕ್ರಾಮಿಕವಲ್ಲದ ರೋಗಗಳ ಕುರಿತ ಉನ್ನತ ಮಟ್ಟದ ಸಭೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅದನಮ್ ಗೆಬ್ರಯೆಸಸ್, ಈ ಘೋಷಣೆಯನ್ನು ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಆ ಸಭೆಯಲ್ಲಿ 93 ವರ್ಷದ ಮುಗಾಬೆ ಭಾಗವಹಿಸಿದ್ದರು.

ಅಧ್ಯಕ್ಷರಾಗಿ ಅಥವಾ ಪ್ರಧಾನಿಯಾಗಿ 37 ವರ್ಷಗಳ ಆಳ್ವಿಕೆಯಲ್ಲಿ, ಮುಗಾಬೆ ತನ್ನ ದೇಶದ ಆರ್ಥಿಕತೆಯನ್ನು ನಾಶಪಡಿಸಿದ್ದಾರೆ ಹಾಗೂ ಹಲವಾರು ಮಾನವಹಕ್ಕು ಉಲ್ಲಂಘನೆ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂಬುದಾಗಿ ಪಾಶ್ಚಿಮಾತ್ಯ ದೇಶಗಳು ಆರೋಪಿಸಿವೆ.

‘‘ಮುಗಾಬೆಯ ಆಘಾತಕಾರಿ ಮಾನವಹಕ್ಕು ದಾಖಲೆಗಳನ್ನು ನೋಡಿದರೆ, ಅವರನ್ನು ಯಾವುದೇ ಸಂಸ್ಥೆಯ ಸದ್ಭಾವನಾ ರಾಯಭಾರಿಯನ್ನಾಗಿ ಕರೆಯುವುದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಡಾ. ಟೆಡ್ರೊಸ್‌ಗೆ ಮುಜುಗರ ಹುಟ್ಟಿಸುತ್ತದೆ’’ ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಉಪ ಕಾರ್ಯಕಾರಿ ನಿರ್ದೇಶಕ ಇಯಾನ್ ಲೆವೈನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News