ಪತ್ರಕರ್ತ ಜಯಂತ್ ಪಡುಬಿದ್ರಿಗೆ ಶ್ರದ್ಧಾಂಜಲಿ
Update: 2017-10-21 18:10 IST
ಉಡುಪಿ, ಅ.21: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್‌ಕ್ಲಬ್ ವತಿಯಿಂದ ಮಂಗಳವಾರ ನಿಧನರಾದ ಪತ್ರಕರ್ತ ಜಯಂತ್ ಪಡುಬಿದ್ರಿ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಉಡುಪಿ ಪ್ರೆಸ್‌ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಜಯಕರ ಸುವರ್ಣ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ದಿನೇಶ್ ಕಿಣಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಂಡೇಲು, ಪ್ರೆಸ್‌ಕ್ಲಬ್ ಸಂಚಾಲಕ ಚೇತನ್ ಪಡುಬಿದ್ರೆ, ಪತ್ರಕರ್ತ ರಾದ ಸುಭಾಶ್ ಚಂದ್ರ ವಾಗ್ಲೆ, ಉಮೇಶ್ ಮಾರ್ಪಳ್ಳಿ, ಶಶಿಧರ್ ಮಾಸ್ತಿಬೈಲು ನುಡಿ ನಮನ ಸಲ್ಲಿಸಿದರು. ಕೋಶಾಧಿಕಾರಿ ರಾಜೇಶ್ ಶೆಟ್ಟಿ ಅಲೊರು ಕಾರ್ಯ ಕ್ರಮ ನಿರೂಪಿಸಿದರು.