200ನೆ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

Update: 2017-10-22 12:59 GMT

ಹೊಸದಿಲ್ಲಿ, ಅ.22: ಮುಂಬೈಯಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್  ವಿರುದ್ಧ ಏಕದಿನ ಪಂದ್ಯವನ್ನಾಡಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 200ನೆ ಪಂದ್ಯವನ್ನಾಡಿದರು.

ಈ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಹೊಸ ದಾಖಲೆಯೊಂದನ್ನು ಅವರು ನಿರ್ಮಿಸಿದ್ದಾರೆ. 200ನೆ ಪಂದ್ಯದಲ್ಲಿ ಶತಕ ಗಳಿಸಿದ 2ನೆ ಬ್ಯಾಟ್ಸ್ ಮೆನ್ ಆಗಿ ಕೊಹ್ಲಿ ಹೊರಹೊಮ್ಮಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 200ನೆ ಪಂದ್ಯದಲ್ಲಿ ಶತಕ ಬಾರಿಸಿದ ಮತ್ತೋರ್ವ ಬ್ಯಾಟ್ಸ್ ಮೆನ್ ಆಗಿದ್ದಾರೆ.

ಇದು ಕೊಹ್ಲಿಯವರ 31ನೆ ಶತಕವಾಗಿದ್ದು, ಈ ಮೂಲಕ ಅವರು ಆಸ್ಟ್ರೇಲಿಯಾ ತಂಡದ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಪಾಂಟಿಂಗ್ ಏಕದಿನ ಕ್ರಿಕೆಟ್ ನಲ್ಲಿ 30 ಶತಕ ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News