×
Ad

ಮಾದಕ ದ್ರವ್ಯ ಜಾಲಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2017-10-22 19:10 IST

ಉಡುಪಿ, ಅ.21: ಇತ್ತೀಚಿನ ದಿನಗಳಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆ ಗಳಲ್ಲಿ ಗಾಂಜಾ ಹಾಗೂ ಇತರ ಮಾದಕ ದ್ರವ್ಯಗಳ ಸರಬರಾಜು ದಿನೇ ದಿನೇ ಹೆಚ್ಚುತ್ತಿದ್ದು, ಇದಕ್ಕೆ ಯುವ ಸಮೂಹವು ಬಲಿಯಾಗುತ್ತಿದೆ. ಇದು ಉಭಯ ಜಿಲ್ಲೆಯ ಜನತೆಯ ನೆಮ್ಮದಿ ಕೆಡಿಸಿದ್ದು, ಇದರ ಮೂಲವನ್ನು ಪತ್ತೆ ಹಚ್ಚಿ ಯುವ ಸಮುದಾಯವನ್ನು ರಕ್ಷಿಸಲು ಸರಕಾರ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಶಂಸುಲ್ ಉಲಮಾ ಆಕಾಡಮಿಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಮೊದಿನಬ್ಬ ಒತ್ತಾಯಿಸಿದ್ದಾರೆ.

ಈ ಸಂಬಂಧ ರಾಜ್ಯ ಗೃಹಸಚಿವರಿಗೆ ಮನವಿ ಸಲ್ಲಿಸಿರುವ ಅವರು, ಈ ಮಾದಕ ಜಾಲಗಳು ಸಂಪೂರ್ಣವಾಗಿ 16-23 ವರ್ಷಗಳ ವಯೋಮಾನದ ಯುವ ಸಮೂಹವನ್ನು ಗುರಿಯಾಗಿರಿಸಿಕೊಂಡು ಇದರ ದಾಸರನ್ನಾಗಿ ಮಾಡು ತ್ತಿವೆ. ಪೊಲೀಸ್ ಇಲಾಖೆಯೂ ಕೂಡಾ ಮಾದಕ ದ್ರವ್ಯ ಸೇವನೆ ಮಾಡಿದವ ರನ್ನು ಮತ್ತು ಸ್ಥಳೀಯವಾಗಿ ಚಿಲ್ಲರೆ ರೂಪದಲ್ಲಿ ಮಾರಾಟ ಮಾಡುವವವರನ್ನು ಬಂಧಿಸುತ್ತದೆಯೇ ಹೊರತು ಅದರ ಮೂಲ ಸರಬರಾಜುದಾರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ ಎಂದು ಅವರು ಮನವಿಯಲ್ಲಿ ದೂರಿದ್ದಾರೆ.

ಸರಕಾರ ಈ ವಿಚಾರದಲ್ಲಿ ಗಂಭೀರ ಕ್ರಮ ಕೈಗೊಳ್ಳದೇ ಉದಾಸೀನತೆ ತೋರಿ ದಲ್ಲಿ ಮುಂದಿನ ದಿನಗಳಲ್ಲಿ ಉಭಯ ಜಿಲ್ಲೆಗಳ ಯುವ ಸಮೂಹವು ಸಂಪೂರ್ಣವಾಗಿ ಮಾದಕ ದ್ರವ್ಯಗಳ ವ್ಯಸನಿಗಳಾಗಿ ಜಿಲ್ಲೆಯು ಅರಾಜಕತೆಯತ್ತ ಸಾಗಲಿದೆ. ಜಿಲ್ಲೆಯ ಯುವಕರು, ವಿದ್ಯಾರ್ಥಿ ಸಮೂಹವನ್ನು ಈ ದಂಧೆಕೋರ ರಿಂದ ರಕ್ಷಿಸಿ ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News