×
Ad

ಬಾರಕೂರು: ಅಂತಾರಾಷ್ಟ್ರೀಯ ವಿಪತ್ತು ತಗ್ಗಿಸುವ ದಿನಾಚರಣೆ

Update: 2017-10-22 19:12 IST

ಬ್ರಹ್ಮಾವರ, ಅ.22: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಬಾರಕೂರು ಶ್ರೀಮತಿ ರುಕ್ಮೀಣಿ ಶೆಡ್ತಿ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ವಿಕೋಪ ತಗ್ಗಿಸುವ ದಿನಾಚರಣೆಯನ್ನು ಕಾಲೇಜಿನ ಸಭಾಭವನದಲಿ್ಲ ಇತ್ತೀಚೆಗೆ ಹಮ್ಮಿ ಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಡಾ.ಉಮೇಶ್ ಪ್ರಭು ಉದ್ಘಾಟಿಸಿದರು. ಖಜಾಂಚಿ ಡಾ. ರಾಮಚಂದ್ರ ಕಾಮತ್ ಪ್ರಾಕೃತಿಕ ವಿಪತ್ತುಗಳು, ವಿಕೋಪಗಳಿಂದ ಆಗುವ ಅನಾಹುತಗಳು, ದೇಶದಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಚಿತ್ರಗಳ/ವಿಡೀಯೋಗಳ ತುಣುಕುಗಳನ್ನು ತೊೀರಿಸುವ ಮೂಲಕ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ವಸಂತರಾಜ ಶೆಟ್ಟಿ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಮುಸ್ತಫ್ ಮುಂಡರಗಿ, ಸಹಾಯಕ ಉಪನ್ಯಾಸಕಿ ನಂದಿನಿ ಕೆ. ಉಪಸ್ಥಿತರಿದ್ದರು. ಸಮಾಜ ಕಾರ್ಯ ವಿಭಾಗದ 110 ವಿದ್ಯಾರ್ಥಿಗಳು ಕಾರ್ಯ ಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News