ಗ್ರ್ಯಾಂಡ್ ಚಾಲೆಂಜ್ ಉಡುಪಿ: ಸಲಹೆ ಸೂಚನೆಗೆ ಆಹ್ವಾನ
Update: 2017-10-22 19:12 IST
ಉಡುಪಿ, ಅ.21: ಗ್ರ್ಯಾಂಡ್ ಚಾಲೆಂಜ್ ಉಡುಪಿ ಎಂಬ ವಿಚಾರದ ಕುರಿತು ಘನತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಸಂಪನ್ಮೂಲ ನಿರ್ವಹಣೆ, ಶಾಲಾ ಪೂರ್ವ ಮತ್ತು ಪ್ರಾಥಮಿಕ ಶಿಕ್ಷಣ, ಮೆನ್ಸ್‌ಟ್ರುಯಲ್ ಹೆಲ್ತ್ ಮೆನೇಜ್ ಮೆಂಟ್ ವಿಷಯಗಳ ಬಗ್ಗೆ ಮಾಹಿತಿಗಳನ್ನು ತಯಾರಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿ ವೆಬ್‌ಸೈಟ್ ಡಿಡಿಡಿ.್ಠಛ್ಠಜಿ.್ಞಜ್ಚಿ.ಜ್ಞಿನಲ್ಲಿ ಅ.20 ರಂದು ಪ್ರಕಟಿಸಲಾಗಿದೆ.
ಆಸಕ್ತ ಸಂಸ್ಥೆಗಳು ನ.10ರೊಳಗೆ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಚುಟುಕು ಟಿಪ್ಪಣಿ ಯನ್ನು 300 ಪದಗಳು ಮೀರದಂತೆ ನಮೂದಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.