ಹಿದಾಯ ಶೇರ್ ಆ್ಯಂಡ್ ಕೇರ್ ಕಾಲನಿ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ವಿಟ್ಲ, ಅ. 22: ಹಿದಾಯ ಫೌಂಡೇಶನ್ ಮಂಗಳೂರು ವತಿಯಿಂದ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯ ಹಿದಾಯ ಶೇರ್ ಆ್ಯಂಡ್ ಕೇರ್ ಕಾಲನಿಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಕಾಲನಿಯಲ್ಲಿನ 48 ಮನೆಗಳು, ಹಿದಾಯ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ, ಕಮ್ಯುನಿಟಿ ಡೆವೆಲಪ್‌ಮೆಂಟ್ ಸೆಂಟರ್, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಸಿದ್ಧ ಉಡುಪು ತಯಾರಿಕಾ ಕೇಂದ್ರ, ಇಂಗ್ಲಿಷ್-ಅರೆಬಿಕ್ ಕಲಿಕಾ ಕೇಂದ್ರ ಮೊದಲಾದವುಗಳ ವೀಕ್ಷಣೆ ನಡೆಸಿದ ಅವರು ಭಿನ್ನ ಸಾಮರ್ಥ್ಯದ ಮಕ್ಕಳು ಹಾಗೂ ಮದ್ರಸ ವಿದ್ಯಾರ್ಥಿಗಳ ಜೊತೆ ಕೆಲ ಕ್ಷಣಗಳನ್ನು ಕಳೆದರು.
ಈ ಸಂದರ್ಭ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ ಬಿ. ಖಂಡ್ರೆ, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನಸಭಾ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕರುಗಳಾದ ಮೊಯ್ದಿನ್ ಬಾವ, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿ.ಪಂ. ಸದಸ್ಯರುಗಳಾದ ಪದ್ಮಶೇಖರ್ ಜೈನ್, ತಾಲೂಕು ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷ್ಮಿ ಸಿ ಬಂಗೇರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಿದಾಯ ಫೌಂಡೇಶನ್ ಟ್ರಸ್ಟ್ ಚೆಯರ್ ಮ್ಯಾನ್ ಹಾಜಿ ಝಕರಿಯಾ ಜೋಕಟ್ಟೆ, ಸಂಸ್ಥೆಯ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಕಾರ್ಯದರ್ಶಿ ಆಬಿದ್ ಅಸ್ಗರ್, ಸದಸ್ಯರುಗಳಾದ ಎಸ್.ಎಂ. ಹಸನ್, ಮಕ್ಬೂಲ್ ಅಹ್ಮದ್, ತಾಹಿರ್ ಇಸ್ಮಾಯಿಲ್, ಕೆ.ಎಸ್. ಆಬೂಬಕರ್, ಎಫ್.ಎಂ. ಬಶೀರ್, ಆಸಿಫ್ ಇಕ್ಬಾಲ್, ಅಬ್ದುಲ್ ರಝಾಕ್ ಅನಂತಾಡಿ, ಸಿದ್ದೀಕ್ ಅಬ್ಬಾಸ್, ಅಬ್ದುಲ್ ಹಮೀದ್ ಗೋಳ್ತಮಜಲು, ರಶೀದ್ ಕಕ್ಕಿಂಜೆ, ಮುಹಮ್ಮದ್ ಬೆಳ್ಳೆಚ್ಚಾರು, ಅಬ್ದುಲ್ ಹಕೀಂ ಕಲಾಯಿ, ಎಂ.ಎಂ. ಮೊಯ್ದಿನ್, ರಿಯಾರ್ ಉಳ್ಳಾಲ, ಹಕೀಂ ಸುನ್ನತ್‌ಕೆರೆ, ಹನೀಫ್ ತೋಡಾರು, ಇಸ್ಮಾಯಿಲ್ ನೆಲ್ಯಾಡಿ, ಜಬ್ಬಾರ್ ಬೆಂಗ್ರೆ, ಪ್ರಮುಖರಾದ ಬಶೀರ್ ಬೈಕಂಪಾಡಿ, ಬಿ.ಎ. ನಝೀರ್, ಅಬ್ದುಲ್ ಲತೀಫ್ ಬಾಂಬಿಲ, ಬಿ. ಅಬ್ದುಲ್ಲಾ ಮಂಗಳೂರು, ಖಲೀಲ್ ಕೆ.ಸಿ.ರೋಡು, ಅನ್ವರ್ ಸಾದತ್ ದಮಾಮ್, ದಾನಿಶ್ ಮುಹಮ್ಮದ್ ಮಂಗಳೂರು, ಪ್ರಮುಖರಾದ ಅಸ್ಗರ್ ಪ್ಲಾಸ್ಟಿಕ್ ಲ್ಯಾಂಡ್ ಮಂಗಳೂರು, ಯೂಸುಫ್ ಬಾಂಬಿಲ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.