×
Ad

ಸೈಕಲ್ ಚಲಾಯಿಸುವುದರ ಮೂಲಕ ಶಾಸಕ ಮೊಯ್ದಿನ್ ಬಾವರಿಂದ ಶಾಪ್ ಉದ್ಘಾಟನೆ

Update: 2017-10-22 20:07 IST

ಕಾಟಿಪಳ್ಳ, ಅ.22: ಕೃಷ್ಣಾಪುರ 6ನೆ ಬ್ಲಾಕಿನಲ್ಲಿ  ರಂಗನಾಥ ಸೈಕಲ್ ಶಾಪನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎ ಮೊಯ್ದಿನ್ ಬಾವ ಸೈಕಲ್ ಚಲಾಯಿಸುವುದರ ಮೂಲಕ ಉದ್ಘಾಟಿಸಿದರು. 

ಈ ಸಂದರ್ಭ ಚಲಾಯಿಸಿದ ಸೈಕಲನ್ನು ಮೊದಲ ಗ್ರಾಹಕರಾಗಿ ಅವರು ಖರೀದಿಸಿದರು.  ಸ್ಥಳೀಯ ಕಾರ್ಪೊರೇಟರ್ ಅಯಾಝ್, ಮಂಗಳೂರು ತಾಜ್ ಸೈಕಲ್ ಮಾಲಕ ಮುತ್ತಲಿಬ್, ಎನ್ಐಟಿಕೆ ಕೋ-ಅಪರೇಟಿವ್ ಸೊಸೈಟಿ ಕಾರ್ಯದರ್ಶಿ ಎಚ್ ಕೆ ರಾಮಚಂದ್ರು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಂಗಳೂರು ಬಾವ, ಮಾಲಕ ಎನ್ ರಾಜು ಉಪಸ್ಥಿತರಿದ್ದರು. ಕಬೀರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News