ಒಡಿಶಾದಲ್ಲಿ ಭಾರೀ ಮಳೆ: 200 ಗ್ರಾಮಗಳು ಮುಳುಗಡೆ

Update: 2017-10-22 17:08 GMT

ಭುವನೇಶ್ವರ, ಆ. 22: ನಿರಂತರ ಸುರಿದ ಮಳೆಯಿಂದಾಗಿ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಶನಿವಾರ 200 ಗ್ರಾಮಗಳು ಜಲಾವೃತವಾಗಿವೆ. ಮಳೆಯಿಂದಾಗಿ ಜಿಲ್ಲೆಯ ಗೋಪಬಂಧುನಗರ್, ಖುಂಟಾ, ಉದಾಲಾ ಹಾಗೂ ಬಾದ್ಸಾಹಿ ನಿವಾಸಿಗಳು ತೊಂದರೆಗೀಡಾಗಿದ್ದಾರೆ. ಬುಧಾಬಾಲಂಗಾ, ದಿಯೋ ನದಿ ಹಾಗೂ ಗಂಘಾರ್ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನೆರೆಯಿಂದಾಗಿ ಎಕರೆಗಟ್ಟಲೆ ಕೃಷಿ ಭೂಮಿ ಮುಳುಗಿದ್ದು, ಬೆಳೆ ನಾಶವಾಗಿದೆ. ಜಿಲ್ಲಾಡಳಿತ ಸಾಕಷ್ಟು ನೆರವು ನೀಡುತ್ತಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಭಾರೀ ಮಳೆಯಾಗಲು ಮುಖ್ಯ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News