ಕಾಂಗ್ರೆಸ್ ನ ಬಿಜೆಪಿ ವಿರೋಧಿ ರಂಗಕ್ಕೆ ಹಾರ್ದಿಕ್ ಪಟೇಲ್ ಬೆಂಬಲ

Update: 2017-10-22 16:24 GMT

ಹೊಸದಿಲ್ಲಿ, ಆ. 22: ನಾವು ಬಿಜೆಪಿ ವಿರೋಧಿ. ಬಿಜೆಪಿಯನ್ನು ಸೋಲಿಸಲು ನಾವು ಕಾಂಗ್ರೆಸ್‌ ಜೊತೆಗಿದ್ದೇವೆ ಎಂದು ಪ್ರಭಾವಿ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಇದರಿಂದ ಗುಜರಾತ್‌ನಲ್ಲಿ ಬಿಜೆಪಿ ವಿರೋಧಿ ರಂಗ ರೂಪಿಸುವ ಕಾಂಗ್ರೆಸ್‌ನ ಪ್ರಯತ್ನಕ್ಕೆ ಬೆಂಬಲ ದೊರಕಿದಂತಾಗಿದೆ.

ಕಾಂಗ್ರೆಸ್ ಪಕ್ಷ ಸೇರುವುದಾಗಿ ಗುಜರಾತ್‌ನ ಹಿಂದುಳಿದ ವರ್ಗದ ನಾಯಕ ಅಲ್ಪೇಶ್ ಠಾಕೂರ್ ಕೂಡಾ ಘೋಷಿಸಿರುವುದು ಕಾಂಗ್ರೆಸ್‌ಗೆ ಇನ್ನೊಂದು ಪ್ರಮುಖ ಉತ್ತೇಜನ ಸಿಕ್ಕಂತಾಗಿದೆ. ಅಕ್ಟೋಬರ್ 23ರಂದು ರಾಹುಲ್ ಗಾಂಧಿ ಗುಜರಾತ್‌ಗೆ ತೆರಳಲಿದ್ದಾರೆ. ಈ ಸಂದರ್ಭ ಠಾಕೂರ್ ಪಕ್ಷ ಸೇರಲಿದ್ದಾರೆ.

ಇನ್ನೋರ್ವ ದಲಿತ ನಾಯಕ ಜಿಗ್ನೇಶ್ ಮೇವಾನಿ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆಮ್ ಆದ್ಮಿ ಪಕ್ಷ ಹಾಗೂ ಜೆಡಿಯು ನಾಯಕ, ಬುಡಕಟ್ಟು ನಾಯಕ ಚೋಟು ವಾಸವು ಸೇರಿದಂತೆ ಸಮಾನ ಮನಸ್ಕ ಪಕ್ಷ ಹಾಗೂ ನಾಯಕರು ಪ್ರಸ್ತಾಪಿತ ರಂಗ ಸೇರಲು ಕಾಂಗ್ರೆಸ್ ಆಹ್ವಾನ ನೀಡಿದೆ.

ಪಕ್ಷ ಸೇರಲು ಪಟೇಲ್ ಹಾಗೂ ಮೇವಾನಿಗೆ ಕಾಂಗ್ರೆಸ್ ಮುಕ್ತ ಆಹ್ವಾನ ನೀಡಿದೆ. ಪಾಟಿದಾರ್, ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯವನ್ನು ಪ್ರತಿನಿಧಿಸುವ ಈ ಮೂವರು ನಾಯಕರಿರುವ ಪ್ರಸ್ತಾಪಿತ ರಂಗ ಬಿಜೆಪಿಯನ್ನು ನಡುಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News