×
Ad

ಟೆಂಪೊ ಮಗುಚಿ ಪೊಲೀಸ್ ಕಾನ್ಸ್‌ಟೆಬಲ್‌ಗೆ ಗಾಯ

Update: 2017-10-22 22:03 IST

ಮಂಗಳೂರು, ಅ.22: ಸುರತ್ಕಲ್ ಎನ್‌ಐಟಿಕೆ ಸಮೀಪ ರವಿವಾರ ಬೆಳಗ್ಗೆ ಟೆಂಪೊವೊಂದು ಸ್ಕಿಡ್ ಆಗಿ ಮಗುಚಿ ಬಿದ್ದ ಪರಿಣಾಮ ಅದರಲ್ಲಿ ಸಂಚರಿಸುತ್ತಿದ್ದ ಟ್ರಾಫಿಕ್ ಪಶ್ಚಿಮ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ಅಶೋಕ್ ಗೌಡ (48) ಗಾಯಗೊಂಡಿದ್ದಾರೆ.

ಅಶೋಕ್ ಗೌಡ ಅವರು ತಮ್ಮ ಪರಿಚಿತರಾದ ರಾಮೇ ಗೌಡ ಎಂಬವರು ಚಲಾಯಿಸುತ್ತಿದ್ದ ಟೆಂಪೊದಲ್ಲಿ ಸಂಚರಿಸುತ್ತಿದ್ದರು. ರಾಷ್ಟ್ಸೀಯ ಹೆದ್ದಾರಿ 66 ರಲ್ಲಿ ಟೆಂಪೊ ಸ್ಕಿಡ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಟೆಂಪೊದಲ್ಲಿದ್ದ ಅಶೋಕ್ ಗೌಡ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಟ್ರಾಫಿಕ್ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News