ವಿಶ್ವಆರೋಗ್ಯ ಸಂಸ್ಥೆಯ ಸದ್ಭಾವನಾ ರಾಯಭಾರಿ ಸ್ಥಾನದಿಂದ ಮುಗಾಬೆಗೆ ಖೊಕ್

Update: 2017-10-22 17:55 GMT

ಜಿನೇವಾ,ಅ.22: ಪಾಶ್ಚಾತ್ಯ ದಾನಿ ರಾಷ್ಟ್ರಗಳು ಹಾಗೂ ಮಾನವಹಕ್ಕು ಗುಂಪುಗಳಿಂದ ಬಲವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆಯವರನ್ನು ತನ್ನ ಸದ್ಭಾವನಾ ರಾಯಭಾರಿ ಸ್ಥಾನದಿಂದ ತೆಗೆದುಹಾಕಿದೆ.

  93 ವರ್ಷ ವಯಸ್ಸಿನ ಮುಗಾಬೆ, ಜಿಂಬಾಬ್ವೆ ಅಧ್ಯಕ್ಷ ಹಾಗೂ ಪ್ರಧಾನಿಯಾಗಿ 37 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ ಹಾಗೂ ಮಾನವಹಕ್ಕುಗಳನ್ನು ಉಲ್ಲಂಘಿಸಿದ್ದಾರೆಂದು ಅಮೆರಿಕ, ಬ್ರಿಟನ್ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ಆರೋಪಿಸಿವೆ.

ಸದ್ಭಾವನಾ ರಾಯಭಾರಿಯಾಗಿ ಮುಗಾಬೆ ನೇಮಕವು ಅಚ್ಚರಿಕರ ಹಾಗೂ ವಿಷಾದಕರವೆಂದು ಬ್ರಿಟನ್ ಬಣ್ಣಿಸಿತ್ತು. ಮುಗಾಬೆ ನೇಮಕದಿಂದ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕಾರ್ಯಗಳನ್ನು ಕಾಂತಿಹೀನಗೊಳಿಸಲಿದೆಯೆಂದು ಅದು ಆತಂಕವ್ಯಕ್ತಪಡಿಸಿತ್ತು.

 ಬುಧವಾರದಂದು ಉರುಗ್ವೆಯಲ್ಲಿ ನಡೆದ ದೀರ್ಘಕಾಲದ ರೋಗಗಳ ಕುರಿತ ಸಮಾವೇಶದಲ್ಲಿ ಮುಗಾಬೆ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೂಸೆಸ್ ಅವರು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News